×
Ad

ಸುರತ್ಕಲ್:‌ ಸಿಪಿಎಂ ಚುನಾವಣಾ ಸಿದ್ಧತಾ ಸಭೆ

Update: 2023-04-23 23:40 IST

ಸುರತ್ಕಲ್:‌ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಗುರುಪುರ ವಲಯ ವ್ಯಾಪ್ತಿಯಲ್ಲಿ ಹಲವು ಗ್ರಾಮಗಳಲ್ಲಿ ಸಿಪಿಎಂ ಪಕ್ಷದ ಪ್ರಮುಖ ಕಾರ್ಯಕರ್ತರ ಚುನಾವಣಾ ಸಿದ್ಧತಾ ಸಭೆ ರವಿವಾರ ನಡೆಯಿತು.

ಸಭೆಯಲ್ಲಿ ಜನವಿರೋಧಿ, ಕೋಮುವಾದಿ, ಭ್ರಷ್ಟ, ಕಾರ್ಮಿಕ ವಿರೋಧಿ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿ ಸುವ ದೃಷ್ಟಿಯಿಂದ ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯ ಕೈಗೊಳ್ಳುವ ಕುರಿತು ನಿರ್ಣಯಿಸಲಾಯಿತು.

ಸಭೆಯಲ್ಲಿ ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮುನೀರ್‌ ಕಾಟಿಪಳ್ಳ, ಸಿಪಿಐಎಂ ಪಕ್ಷದ ಜಿಲ್ಲಾಧ್ಯಕ್ಷ ಯಾದವ ಶೆಟ್ಟಿ, ವಸಂತ ಆಚಾರಿ ಮೊದಲಾದವರು ಉಪಸ್ಥಿತರಿದ್ದರು.

Similar News