×
Ad

ಮಂಗಳೂರು: ಗಾಂಜಾ ಮಾರಾಟದ ಆರೋಪಿ ಸೆರೆ

Update: 2023-04-28 20:15 IST
ಮಂಗಳೂರು : ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಗಾಂಜಾ ಮಾರಾಟ ಪ್ರಕರಣದ ಆರೋಪಿ ಒಡಿಸ್ಸಾದ ಮುನ್ನಾ ಸಾಹು ಎಂಬಾತನನ್ನು ಮಂಗಳೂರು ಸೆನ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 2021ರ ಜೂ.28ರಂದು ಈತ ಇನ್ನೋರ್ವ ಆರೋಪಿ ಅಬ್ದುಲ್ ರಹಿಮಾನ್‌ಗೆ 3 ಕೆಜಿ 235 ಗ್ರಾಂ ಗಾಂಜಾ ನೀಡಿದ್ದ ಎನ್ನಲಾಗಿದೆ. ಈ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದ ಈತನನ್ನು ಒಡಿಸ್ಸಾದಲ್ಲಿ ಬಂಧಿಸಿ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Similar News