×
Ad

ಬೆಂಗಳೂರು| ಕಾಲೇಜು ಫೆಸ್ಟ್​ನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ: ಓರ್ವ ವಿದ್ಯಾರ್ಥಿಯ ಹತ್ಯೆ

Update: 2023-04-29 11:42 IST

ಬೆಂಗಳೂರು: ಕಾಲೇಜು ಫೆಸ್ಟ್ ನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಯಲ್ಲಿ, ಓರ್ವ ಕಾಲೇಜು ವಿದ್ಯಾರ್ಥಿಯ ಹತ್ಯೆ ನಡೆದಿರುವ ಘಟನೆ ಬಾಗಲೂರು ಠಾಣಾ ವ್ಯಾಪ್ತಿಯ ರೇವಾ ಕಾಲೇಜಿನಲ್ಲಿ ನಡೆದಿದೆ. 

ಮೃತಪಟ್ಟ ವಿದ್ಯಾರ್ಥಿಯನ್ನು ರೇವಾ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿದ್ದ ಗುಜರಾತ್ ಮೂಲದ ಭಾಸ್ಕರ್ ಜೆಟ್ಟಿ (22) ಎಂದು ಗುರುತಿಸಲಾಗಿದೆ.

ಕಾಲೇಜು ಫೆಸ್ಟ್ ವೇಳೆ ಎರಡು ಗುಂಪುಗಳ ನಡುವೆ ಗಲಾಟೆಯಾಗಿತ್ತು. ಈ ವೇಳೆ ಭಾಸ್ಕರ್ ಗೆ ಇನ್ನೊಂದು ಗುಂಪು ಚಾಕುವಿನಿಂದ ಇರಿದಿದ್ದು, ಸ್ಥಳದಲ್ಲೇ ವಿದ್ಯಾರ್ಥಿ ಭಾಸ್ಕರ್ ಜೆಟ್ಟಿ ಸಾವನ್ನಪ್ಪಿದ್ದಾರೆ.

ಬಾಗಲೂರು ಪೊಲೀಸರು ಕಾಲೇಜು ಸಿಸಿಟಿವಿ ಪರಿಶೀಲಿಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Similar News