×
Ad

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ರೈತರ ಸಾಲ ಮನ್ನಾ ಮಾಡಲಾಯಿತು: ಎಚ್‌.ಡಿ. ದೇವೇಗೌಡ

Update: 2023-05-01 21:16 IST

ಮಂಗಳೂರು: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡಲಾ ಯಿತು. ಜೆಡಿಎಸ್ ಸರಕಾರದ ಅವಧಿಯಲ್ಲಿ ಮಹಿಳೆಯರಿಗೆ ಸ್ವಾವಲಂಬನೆ ಸಿಕ್ಕಿತು. ರೈತರ ಸಾಲ ಮನ್ನಾ ಆಗಿ ನೆಮ್ಮದಿಯ ಜೀವನ ಸಿಕ್ಕಿತು. ರಾಜ್ಯದಲ್ಲಿ ಶಾಂತಿ ನೆಮ್ಮದಿಯಿಂದ ಜನರು ಜೀವಿಸುವಂತಾಯಿತು ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದರು.

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಮೊಯ್ದಿನ್‌ ಬಾವ ಪರ ಪ್ರಚಾರಕ್ಕಾಗಿ ನಗರಕ್ಕೆ ಆಗಮಿಸಿದ್ದ ವೇಳೆ ಖಾಸಗಿ ಹೊಟೇಲ್‌ ನಲ್ಲಿ ಕರೆಯಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ನಾಯಕರು ಮೋಸದಿಂದ ಟಿಕೆಟ್ ಸಿಗುವುದನ್ನು ತಪ್ಪಿಸಿದ ಕಾರಣಕ್ಕಾಗಿ ನಾವು ಅವರಲ್ಲಿ ಧೈರ್ಯ ತುಂಬಿ ಜೆಡಿಎಸ್ ನಿಂದ ಟಿಕೆಟ್ ನೀಡಿದ್ದೇವೆ. ಮೊಯ್ದಿನ್‌ ಬಾವ ಮಾಡಿರುವ ಅಭಿವೃದ್ಧಿ, ತ್ಯಾಗಕ್ಕೆ ಈ ಬಾರಿ ಮತದಾರರು ಅವರ ಕೈ ಹಿಡಿಯಲಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮೊಯ್ದಿನ್‌ ಬಾವ, ಡಾ. ಅಮರಶ್ರೀ, ಸುಮತಿ ಹೆಗ್ಡೆ, ಯುವಜನತಾದಳದ ಅಕ್ಷಿತ್ ಸುವರ್ಣ, ಜಿಲ್ಲಾಧ್ಯಕ್ಷ ಎಂಬಿ ಸದಾಶಿವ, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮತ್ತಿತರರು ಉಪಸ್ಥಿತರಿದ್ದರು.

Similar News