ದ.ಕ.: ‘ಮನೆಯಿಂದಲೇ ಮತದಾನ’ಕ್ಕೆ ಉತ್ತಮ ಸ್ಪಂದನೆ
Update: 2023-05-02 22:04 IST
ಮಂಗಳೂರು: ಚುನಾವಣಾ ಆಯೋಗವು ಇದೇ ಮೊದಲ ಬಾರಿಗೆ 80 ವರ್ಷ ಪ್ರಾಯ ಮೇಲ್ಪಟ್ಟ ಹಾಗೂ ವಿಕಲಚೇತನ ಮತದಾರರಿಗೆ ‘ಮನೆಯಿಂದಲೇ ಮತದಾನ’ ಪ್ರಕ್ರಿಯೆಗೆ ದ.ಕ.ಜಿಲ್ಲೆಯಲ್ಲಿ ಉತ್ತಮ ಸ್ಪಂದನ ವ್ಯಕ್ತವಾಗಿದೆ.
ಎ.29ರಿಂದ ಈ ಪ್ರಕ್ರಿಯೆ ಆರಂಭಗೊಂಡಿದ್ದು, ಮೊದಲ ದಿನ 184 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಮಂಗಳವಾರ ಸಂಜೆಯ ವೇಳೆಗೆ 7,639 ಮಂದಿ ಮತದಾನ ಮಾಡಿದ್ದಾರೆ. ಇವರಲ್ಲಿ 80 ವರ್ಷ ಮೇಲ್ಪಟ್ಟ 6,615 ಹಾಗೂ ವಿಕಲಚೇತನ 1,024 ಮತದಾರರು ಸೇರಿದ್ದಾರೆ.
ಜಿಲ್ಲೆಯಲ್ಲಿ 12,868 ಮತದಾರರು ಮನೆಯಿಂದಲೇ ಮತದಾನ ಮಾಡಲು ಅರ್ಜಿ ಸಲ್ಲಿಸಿದ್ದು, ಇನ್ನು 5,229 ಮಂದಿ ಮತದಾನ ಮಾಡಲು ಬಾಕಿ ಇದ್ದಾರೆ. ಮೇ 6ರವರೆಗೆ ಮನೆಯಂದಲೇ ಮತದಾನ ಮಾಡಲು ಅವಕಾಶ ವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.