×
Ad

ಮಂಗಳೂರು: ಕಾನ್ಸರ್ ಜಾಗೃತಿಗಾಗಿ ‘ಯೆನ್ ರನ್’ ಓಟ

Update: 2023-05-02 22:18 IST

ಮಂಗಳೂರು: ಸಾರ್ವಜನಿಕರಲ್ಲಿ ಸಾಮಾನ್ಯ ಕ್ಯಾನ್ಸರ್‌ನ ಆರಂಭಿಕ ಪತ್ತೆಯ ಕುರಿತು ಹೆಚ್ಚಿನ ಅರಿವು ಮೂಡಿಸುವ ಉದ್ದೇಶಕ್ಕಾಗಿ ಝುಲೇಖಾ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿ ಮತ್ತು  ಯೆನೆಪೋಯ ಡೀಮ್ಡ್  ವಿವಿ ರಾಷ್ಟ್ರೀಯ ಸೇವಾ ಯೋಜನೆ  ವತಿಯಿಂದ  ರವಿವಾರ  ಫಿಝಾ ಬೈ ನೆಕ್ಸಸ್   ಮಾಲ್‌ನಿಂದ ‘ಯೆನ್ ರನ್’  ತನಕ ಓಟ ಆಯೋಜಿಸಲಾಗಿತ್ತು.

3 ಕಿ.ಮೀ ಮತ್ತು 5 ಕಿ.ಮೀ ವಿಭಾಗದಲ್ಲಿ ಫಿಝಾ ನೆಕ್ಸಸ್ ಮಾಲ್‌ನಿಂದ 3 ಕಿ.ಮೀ ಓಟವು ಕೊಡಿಯಾಲ್‌ಬೈಲ್‌ನ  ಯೇನೆಪೋಯ ಆಸ್ಪತ್ರೆಯವರೆಗೆ ಸಾಗಲಿದೆ. 5 ಕಿ.ಮೀ ಓಟವು ಪಿವಿಎಸ್‌ವರೆಗೆ ನಡೆಯಿತು.

ಚಲನಚಿತ್ರ ನಟ ಮತ್ತು ಗಾಯಕ ಅರ್ಜುನ್ ಕಾಪಿಕಾಡ್ ಓಟಕ್ಕೆ ಚಾಲನೆ ನೀಡಿದರು. ಯೆನೆಪೋಯ ವಿವಿ ವೈನ್ಸ್ ಚಾನ್ಸ್‌ಲರ್ ಡಾ.ಎಂ. ವಿಜಯ ಕುಮಾರ್ ಅವರು ಯೆನ್ ರನ್‌ನಲ್ಲಿ  ಸುಮಾರು 2 ಸಾವಿರ ಮಂದಿ ಭಾಗವಹಿಸುವುದನ್ನು ನಿರೀಕ್ಷಿಸಲಾಗಿದೆ ಎಂದರು.

ಅಂತರ್‌ರಾಷ್ಟ್ರೀಯ ಕ್ರೀಡಾಪಟು ಶ್ರೀಮಾ ಪ್ರಿಯದರ್ಶಿನಿ, ಖ್ಯಾತ ನೃತ್ಯಗಾರ್ತಿ ಶ್ವೇತಾ ಅರೆಹೊಳೆ ಕಾರ್ಯಕ್ರಮಕ್ಕೆ ಬ್ರ್ಯಾಂಡ್ ಅಂಬಾಸಡರ್ ಆಗಿ ಭಾಗವಹಿಸಿದ್ದರು. ಯೆನೆಪೋಯ ವಿಶ್ವವಿದ್ಯಾನಿಲಯದ ಚಾನ್ಸ್‌ಲರ್  ಡಾ. ಯೆನೆಪೋಯ ಅಬ್ದುಲ್ಲ ಕುಂಞಿ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ  ಪ್ರತಾಪ್ ಲಿಂಗಯ್ಯ, ಎಸಿಪಿ ಟ್ರಾಫಿಕ್  ಗೀತಾ ಕುಲಕರ್ಣಿ , ಅಸರ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ. ಆಶಾ ಜ್ಯೋತಿ ರೈ, ಯೋಜನಾ ಅಧಿಕಾರಿ ರಾಜಶೇಖರ ಎ, ದಕ್ಷಿಣ ಕನ್ನಡ ಮಹಿಳಾ ಒಕ್ಕೂಟಗಳ ಅಧ್ಯಕ್ಷೆ ಚಂಚಲ ತೆಜೋಮಯ  ಉಪಸ್ಥಿತರಿದ್ದರು.

ಯೆನೆಪೋಯ  ವಿಶ್ವವಿದ್ಯಾಲಯದ ಚಾನ್ಸಲರ್ ಡಾ.ಎಂ.ವಿಜಯ್ ಕುಮಾರ್ ವರದಿ ಮಂಡಿಸಿದರು.  ರಿಜಿಸ್ಟಾರ್ ಡಾ.ಗಂಗಾಧರ ಸೋಮಯಾಜಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ಅಶ್ವಿನ್‌ಎಸ್.ಶೆಟ್ಟಿ ವಂದಿಸಿದರು.

Similar News