×
Ad

ಬೆಂಗಳೂರಿನಲ್ಲಿ ಮೋದಿ ರೋಡ್ ಶೋ: ಬಾಲ್ಕನಿ / ಟೆರೇಸ್ ನಿಂದ ರ‍್ಯಾಲಿ ವೀಕ್ಷಣೆ ಮಾಡುವಂತಿಲ್ಲ!

Update: 2023-05-05 11:34 IST

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಹಿನ್ನೆಲೆಯಲ್ಲಿ ಮೇ 6ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ನಮ್ಮ ಕರ್ನಾಟಕ ಯಾತ್ರೆ’ ಹೆಸರಿನಲ್ಲಿ ರಾಜಧಾನಿಯ 18 ಕ್ಷೇತ್ರಗಳಲ್ಲಿ 36.6 ಕಿ.ಮೀ. ದೂರ ಬೃಹತ್‌ ರೋಡ್‌ ಶೋ ನಡೆಸಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ರೋಡ್​ ಶೋ ನಡೆಯುವ ಸ್ಥಳಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಪುಟ್ಟೇನಹಳ್ಳಿ ಪೊಲೀಸರು ಜೆ ಪಿ ನಗರದ ಪ್ರತಿ ಮನೆಗಳಿಗೆ ಹಾಗೂ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ನೋಟಿಸ್ ನೀಡಿದ್ದಾರೆ. 

-ಮನೆಗಳ ಬಾಲ್ಕನಿ, ಟೆರೆಸ್ ಮೇಲೆ  ರ‍್ಯಾಲಿ ವೀಕ್ಷಣೆ ಮಾಡುವಂತಿಲ್ಲ.

- ರ‍್ಯಾಲಿ ಮುಗಿಯುವವರೆಗೆ ವಾಹನಗಳು ಹೊರ ತೆಗೆಯುವಂತಿಲ್ಲ.

- ಕಟ್ಟಡದ ಒಳ ಮತ್ತು ಹೊರ ಹೋಗುವ ಮಾರ್ಗ ಬಂದ್ ಮಾಡಬೇಕು.

- ಕಟ್ಟಡದ ಒಳಗಡೆ ಅಪರಿಚಿತ ವ್ಯಕ್ತಿಗಳಿಗೆ ಪ್ರವೇಶ ನೀಡಬಾರದು.

-ರ‍್ಯಾಲಿ ನೋಡ ಬಯಸುವವರು ನಿಗದಿತ ಸ್ಥಳಕ್ಕೆ ಆಗಮಿಸಿ ವೀಕ್ಷಿಸಬೇಕು. 

Similar News