ಪ್ರಧಾನಿ ಮೋದಿಯಿಂದ "ನಮ್ಮ ಬೆಂಗಳೂರು ನಮ್ಮ ಹೆಮ್ಮೆ" ರೋಡ್ ಶೋ ಆರಂಭ
ಬೆಂಗಳೂರು, ಮೇ 6: ಇಂದು ಮತ್ತು ನಾಳೆ ಬೆಂಗಳೂರು ನಗರದಲ್ಲಿ ಹಮ್ಮಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಜೆಪಿ ನಗರದ ಸೋಮೇಶ್ವರ ಸಭಾಭವನದಿಂದ ಆರಂಭವಾಗಿದೆ.
ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ‘ಮೋದಿ ಮೋದಿ’ ಎಂದು ಕೂಗುತ್ತ, ಹೂವಿನ ಸುರಿಮಳೆಗೈಯುತ್ತ ನರೇಂದ್ರ ಮೋದಿಯವರ ರೋಡ್ ಶೋವನ್ನು ಸ್ವಾಗತಿಸಿದರು.
ಸೋಮೇಶ್ವರ ಸಭಾಭವನ ಬಳಿಯಿಂದ ಆರಂಭವಾದ ರೋಡ್ ಷೋವು ಸುಮಾರು 26 ಕಿಮೀ ಕ್ರಮಿಸಲಿದೆ. ಜೆ.ಪಿ. ನಗರ, ಜಯನಗರ, ಸೌತ್ ಎಂಡ್ ಸರ್ಕಲ್, ಮಾಧವರಾವ್ ವೃತ್ತ, ರಾಮಕೃಷ್ಣ ಆಶ್ರಮ, ಉಮಾ ಥಿಯೇಟರ್ ವೃತ್ತ, ಮೈಸೂರು ಸಿಗ್ನಲ್, ಟೋಲ್ ಗೇಟ್ ಸಿಗ್ನಲ್, ಗೋವಿಂದರಾಜನಗರ, ಮಾಗಡಿ ರೋಡ್ ಜಂಕ್ಷನ್, ಶಂಕರ ಮಠ ಸರ್ಕಲ್, ಮಲ್ಲೇಶ್ವರ ಸರ್ಕಲ್, ಸಂಪಿಗೆ ರಸ್ತೆಯ 18ನೇ ಅಡ್ಡರಸ್ತೆ ಜಂಕ್ಷನ್ ಮೂಲಕ ಈ ರೋಡ್ ಶೋ ತೆರಳಲಿದೆ.
ಮಧ್ಯಾಹ್ನ 1 ಗಂಟೆವರೆಗೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದು, ನಗರದ 34 ರಸ್ತೆಗಳಲ್ಲಿ ಸಂಚಾರಕ್ಕೆ ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿದೆ.
ರೋಡ್ ಶೋದಲ್ಲಿ ಪ್ರಧಾನಿ ಮೋದಿಯವರಿಗೆ ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮೋದಿ ರೋಡ್ ಶೋ: ಬಾಲ್ಕನಿ / ಟೆರೇಸ್ ನಿಂದ ರ‍್ಯಾಲಿ ವೀಕ್ಷಣೆ ಮಾಡುವಂತಿಲ್ಲ!