×
Ad

ಮಂಗಳೂರು ವಿಧಾನಸಭಾ ಕ್ಷೇತ್ರ: 27 ಶೇ. ಮತದಾನ

Update: 2023-05-10 12:02 IST

ಉಳ್ಳಾಲ, ಮೇ 10:  ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಮಧ್ಯಾಹ್ನ 11:45ರ ವೇಳೆಗೆ 27 ಶೇ. ಮತದಾನ ಆಗಿದೆ ಎಂದು ಚುನಾವಣಾ ಉಸ್ತುವಾರಿ ರಾಜು ಮಾಹಿತಿ ನೀಡಿದ್ದಾರೆ.

 ಬೆಳಗ್ಗೆ ಮಂದಗತಿಯಲ್ಲಿ ಸಾಗಿದ ಮತದಾನ ಪ್ರಕ್ರಿಯೆ 10 ಗಂಟೆಯ ಬಳಿಕ ಚುರುಕುಗೊಂಡಿದೆ. ಕುತ್ತಾರ್, ಬಬ್ಬುಕಟ್ಟೆ, ಚೆಂಬುಗುಡ್ಡೆ, ತಲಪಾಡಿ, ಕೆಸಿರೋಡ್, ಕಿನ್ಯ, ಅಂಬ್ಲಮೊಗರು ಪ್ರದೇಶದಲ್ಲಿ ತಮ್ಮ ಹಕ್ಕು ಚಲಾವಣೆಗಾಗಿ ಮತದಾರರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬರುತ್ತಿದೆ. ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ,

 ಮತ ಯಂತ್ರದಲ್ಲಿ ಲೋಪದೋಷಗಳುಂಟಾದ ಬಗೆ ವರದಿಯಾಗಿಲ್ಲ. ಸೂಕ್ಷ್ಮ ಮತಗಟ್ಟೆಗಳಾದ ಕುತ್ತಾರ್, ಕಲ್ಲಾಪು, ಬೀರಿ, ಉಳ್ಳಾಲದಲ್ಲಿ ಭದ್ರತೆ ಏರ್ಪಡಿಸಲಾಗಿದ್ದು, ಪಕ್ಷಗಳ ಕಾರ್ಯಕರ್ತರು ಗುಂಪು ಸೇರದಂತೆ ಸೂಚನೆ ನೀಡಲಾಗಿದೆ.

Similar News