ಮಂಗಳೂರು: ಜೈಲು ಸಿಬ್ಬಂದಿಯ ಬಳಿ ಗಾಂಜಾ ಪತ್ತೆ
Update: 2023-05-11 22:43 IST
ಮಂಗಳೂರು, ಮೇ 11: ನಗರದ ಜಿಲ್ಲಾ ಕಾರಾಗೃಹದ ಸಿಬ್ಬಂದಿಯ ಬಳಿ ಗಾಂಜಾ ಪತ್ತೆಯಾಗಿರುವುದಾಗಿ ವರದಿಯಾಗಿದೆ.
ಗುರುವಾರ ಕೆಐಎಸ್ಎಫ್ ನವರು ತಪಾಸಣೆ ಮಾಡುವಾಗ ಸಿಬ್ಬಂದಿಯೊಬ್ಬನ ಬಳಿ ಸುಮಾರು 50 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಆತನನ್ನು ಬರ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.