×
Ad

ಸಿಎಂ ಬೊಮ್ಮಾಯಿ- ಬಿಎಸ್ ವೈ ಭೇಟಿ; ಮಹತ್ವದ ಚರ್ಚೆ

Update: 2023-05-12 14:34 IST

ಬೆಂಗಳೂರು, ಮೇ 12: ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಹಿನ್ನಡೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ಪ್ರಮುಖ ನಾಯಕರು ಸಮಾಲೋಚನೆ ನಡೆಸಿದ್ದಾರೆ.

ಶುಕ್ರವಾರ ಇಲ್ಲಿನ ಕುಮಾರಪಾರ್ಕ್‍ನಲ್ಲಿರುವ ಯಡಿಯೂರಪ್ಪರ ಅಧಿಕೃತ ನಿವಾಸ ಕಾವೇರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಮುರುಗೇಶ್ ನಿರಾಣಿ, ಭೈರತಿ ಬಸವರಾಜ್, ರಾಜಸಭಾ ಸದಸ್ಯ ಲೇಹರ್ ಸಿಂಗ್, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಬಿಜೆಪಿಯ ಮುಂದಿನ ನಡೆಯ ಬಗ್ಗೆ ಚರ್ಚಿಸಿದರು.

‘ಸಮೀಕ್ಷೆಗಳು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿದ್ದರೆ ಶತಾಯ-ಗತಾಯ ಅಧಿಕಾರ ಹಿಡಿಯಲೇಬೇಕು. ಅದಕ್ಕಾಗಿ ಮಾಡಬೇಕಾದ ತಂತ್ರಗಾರಿಕೆ ಕುರಿತು ಸಮಾಲೋಚನೆ ನಡೆಸಿದರು. ಒಂದಷ್ಟು ಕಡಿಮೆ ಸ್ಥಾನ ಬಂದರೂ ಸರಕಾರ ರಚನೆ ಮಾಡಲು ಏನೆಲ್ಲ ಮಾಡಬೇಕು ಎನ್ನುವ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಸಮೀಕ್ಷಾ ವರದಿಗಳು ಹಾಗೂ ಪಕ್ಷದ ವರದಿಯನ್ನು ಹೈಕಮಾಂಡ್‍ಗೆ ರವಾನಿಸಲಾಗಿದ್ದು ಆ ಬಗ್ಗೆಯೂ ಯಡಿಯೂರಪ್ಪ ಜೊತೆ ಸಿಎಂ ಚರ್ಚಿಸಿದರು. ಚುನಾವಣೆ ನಂತರ ಯಡಿಯೂರಪ್ಪ ನಿವಾಸದಲ್ಲಿ ನಡೆದ ಮೊದಲ ಸಭೆ ಇದಾಗಿದ್ದು, ರಾಜಕೀಯವಾಗಿ ಬಿಜೆಪಿ ಮುಂದಿಡಬೇಕಾದ ಹೆಜ್ಜೆಗಳ ಕುರಿತು ಚರ್ಚಿಸಿದರು. 

ವರದಿ ಒಪ್ಪುವುದಿಲ್ಲ: ‘ಚುನಾವಣೋತ್ತರ ಸಮೀಕ್ಷಾ ವರದಿಯ ತೀರ್ಪನ್ನು ಬಿಜೆಪಿ ಒಪ್ಪುವುದಿಲ್ಲ. ಪಕ್ಷಕ್ಕೆ ಸ್ಪಷ್ಟ ಬಹುಮತ ಬರಲಿದೆ. 105ರ ಮೇಲೆ 120ರ ಒಳಗಡೆ ನಮ್ಮ ಅಂಕಿ-ಸಂಖ್ಯೆ ಬರಲಿದ್ದು, ನಾವೇ ಈ ಬಾರಿಯೂ ಸರಕಾರ ರಚನೆ ಮಾಡುತ್ತೇವೆ’

-ಎನ್.ರವಿಕುಮಾರ್ ಬಿಜೆಪಿ ಪ್ರಧಾನ ಕಾರ್ಯದರ್ಶಿ

Similar News