×
Ad

ಸಿಬಿಎಸ್‌ಇ ಫಲಿತಾಂಶ : ಕೆನರಾ ಹೈಸ್ಕೂಲ್ ಶೇ. 100 ಫಲಿತಾಂಶ

Update: 2023-05-12 22:07 IST

ಮಂಗಳೂರು, ಮೇ  12: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) 2023ನೇ ಶೈಕ್ಷಣಿಕ ವರ್ಷದ ಹತ್ತನೇ ತರಗತಿಯ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಶೇ 100

ಕೆನರಾ ಹೈ ಸ್ಕೂಲ್ (ಸಿಬಿಎಸ್‌ಇ ) ಶಾಲೆಯು ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದೆ. 120 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ಉತ್ತೀರ್ಣಗೊಂಡಿದ್ದಾರೆ. 117 ವಿದ್ಯಾರ್ಥಿಗಳು ಶೇ 60 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.

10 ವಿದ್ಯಾರ್ಥಿಗಳು ಶೇ 95 ಕ್ಕಿಂತ ಹೆಚ್ಚು ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಸಾರಂಗ ರಾವ್ ಇನೊಳಿ(ಶೇ 97), ದಿಯಾ ಎನ್ ಕಾಮತ್(ಶೇ 96.8), ಜಾಹ್ನವಿ ಶೆಣೈ(ಶೇ 96.6), ವಾರುಣಿ ಸುರೇಶ್(ಶೇ 96), ಆರ್ಯನ್ ಎಂ(ಶೇ 96), ವಿ ಸಾಯಿ ವಿಜ್ವಲ್ ಕಾರ್ತಿಕ್(ಶೇ 96), ಸತ್ಯಪ್ರಸಾದ್ ಜಿ ಪೈ(ಶೇ 95.8), ಕೆ ಆಕಾಶ್ ಎಂ ರಾವ್(ಶೇ 95.4), ಕಾತ್ಯಾಯಿನಿ ಎಸ್ ಪೈ(ಶೇ 95.4), ತುಳಸಿ ಹರಿಪ್ರಸಾದ್ (ಶೇ 95.4) ಅಂಕಗಳನ್ನು ಪಡೆದು ಉತ್ತಮ ಸಾಧನೆಯನ್ನು ಮಾಡಿದ್ದಾರೆ.

24 ವಿದ್ಯಾರ್ಥಿಗಳು ಶೇ 90 ಕ್ಕಿಂತ ಹೆಚ್ಚು, 23 ವಿದ್ಯಾರ್ಥಿಗಳು ಶೇ 85ಕ್ಕಿಂತ ಹೆಚ್ಚು, 60 ವಿದ್ಯಾರ್ಥಿಗಳು ಶೇ 60ಕ್ಕಿಂತ ಹೆಚ್ಚು, ಹಾಗೂ  3 ವಿದ್ಯಾರ್ಥಿಗಳು ಶೇ 48 ಗಿಂತ ಹೆಚ್ಚು  ಪಡೆದುಕೊಂಡಿದ್ದಾರೆ.

Similar News