×
Ad

'ಆಪರೇಷನ್' ಆದ ಶಾಸಕರಿಗೆ ಈ ಬಾರಿಯ ಚುನಾವಣೆ ಪಾಠ ಕಲಿಸಿದೆ: ಸಿದ್ದರಾಮಯ್ಯ

Update: 2023-05-13 15:08 IST

ಬೆಂಗಳೂರು: ಬಿಜೆಪಿ ಸಾಕಷ್ಟು ಹಣ ವ್ಯಯ ಮಾಡಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದರು. ಆಪರೇಷನ್ ಆದ ಶಾಸಕರಿಗೆ ಈ ಬಾರಿಯ ಚುನಾವಣೆ ಪಾಠ ಕಲಿಸಿದೆ. ಬಿಜೆಪಿ ದ್ವೇಶ ರಾಜಕಾರಣ ಸಂಸ್ಕೃತಿ ಬಿತ್ತಿದ್ದರು. ಕರ್ನಾಟಕ ಜನ ಇದರಿಂದ ಬೇಸತ್ತು ಕಾಂಗ್ರೆಸ್ ಪರ ಒಲವು ತೋರಿದ್ದಾರೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. 

ಸದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ ಎಣಿಕೆ ಇನ್ನೂ ಮುಗಿದಿಲ್ಲ. ಈ ಟ್ರೆಂಡ್ ಕಾಂಗ್ರೆಸ್ ಮುಂದೆ ಬರಲಿದೆ ಎಂದು ತೋರಿಸುತ್ತದೆ. ನಾನು ಪ್ರಚಾರದ ವೇಳೆಯೇ ಹೇಳಿದ್ದೆ. ಕಾಂಗ್ರೆಸ್ 130 ಸೀಟ್ ಪಡೆಯುತ್ತೆ ಎಂದು. ಅದು ಇಂದು ನಿಜವಾಗಿದೆ. ನಾವು 130 ನ್ನೂ ಮೀರಿ ಮುಂದೆ ಹೋಗಿದ್ದೇವೆ. ಇದು ಕಾಂಗ್ರೆಸ್ ಗೆ ಬಹುದೊಡ್ಡ ಗೆಲುವು. ರಾಜ್ಯದ ಜನ ಬಿಜೆಪಿ ಸರ್ಕಾರದ ನಡೆಯಿಂದ ಬೇಸತ್ತಿದ್ದರು. 2008,2018 ರಲ್ಲೂ ಬಿಜೆಪಿ ಗೆಲುವು ಸಾಧಿಸಿರಲಿಲ್ಲ. ಸಾಕಷ್ಟು ಹಣ ವ್ಯಯ ಮಾಡಿ ಆಪರೇಷನ್ ಕಮಲದ ಮೂಲಕ ಅವರು ಅಧಿಕಾರಕ್ಕೆ ಬಂದರು. ಆಪರೇಷನ್ ಆದ ಶಾಸಕರಿಗೆ ಈ ಬಾರಿಯ ಚುನಾವಣೆ ಪಾಠ ಕಲಿಸಿದೆ. ಬಿಜೆಪಿ ದ್ವೇಶ ರಾಜಕಾರಣ ಸಂಸ್ಕೃತಿ ಬಿತ್ತಿದ್ದರು. ಕರ್ನಾಟಕ ಜನ ಇದರಿಂದ ಬೇಸತ್ತು ಕಾಂಗ್ರೆಸ್ ಪರ ಒಲವು ತೋರಿದ್ದಾರೆ ಎಂದರು. 

ಹಣ ಬಲದಿಂದ ಬಿಜೆಪಿ ಯಾವ ಹಂತಕ್ಕೆ ಬೇಕಿದ್ದರೂ ಹೋಗ್ಬಹುದು. ಆದರೆ ಈ ಚುನಾವಣೆ ಫಲಿತಾಂಶ ನಮಗೆ ಲೋಕ ಸಭಾ ಚುನಾವಣೆ ಗೆ ಮೆಟ್ಟಿಲು. ನನಗೆ ನಂಬಿಕೆ ಇದೆ. ರಾಹುಲ್ ಗಾಂಧಿ ಪ್ರಧಾನಿ ಸ್ಥಾನವನ್ನು ಅಲಂಕರಿಸುವ ಸಾಧ್ಯತೆಯೂ ಬಹಳವಾಗಿಯೇ ಇದೆ. ನಾಳೆ ಸಿಎಲ್ ಪಿ ಮೀಟಿಂಗ್ ಮಾಡುತ್ತೇವೆ ಎಂದು ತಿಳಿಸಿದರು.

ಬಳಿಕ ಬಜರಂಗದಳ ಗದ್ದಲ ಕುರಿತು ಮಾತನಾಡಿದ ಅವರು, ದ್ವೇಷ ಭಾಷಣ ಮಾಡುವಂತಹ ಸಂಘಟನೆ ಗಳು ಬ್ಯಾನ್ ಆಗಬೇಕೆಂದು ನಾನು ಹೇಳಿದ್ದೆ. ಆದರೆ ಅವರು ಬಜರಂಗಬಲಿ ಎಂದು ಚುನಾವಣೆ ಎದುರಿಸಿದರು. ನನ್ನ ಹೇಳಿಕೆಯನ್ನೇ ತಿರುಚಿಬಿಟ್ಟರು. ಆದರೂ ಗೆಲುವು ನಮಗೆ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.

Similar News