'ಬ್ರ್ಯಾಂಡ್ ಕರ್ನಾಟಕ' ಗೆದ್ದಿದೆ: ರಣದೀಪ್ ಸಿಂಗ್ ಸುರ್ಜೆವಾಲಾ
Update: 2023-05-14 01:00 IST
ಬೆಂಗಳೂರು, ಮೇ 13: ಕಾಂಗ್ರೆಸ್ ಪಕ್ಷದ ಈ ಗೆಲುವು ಕರ್ನಾಟಕದ ಮತದಾರರ ಗೆಲುವಾಗಿದೆ. ಬ್ರ್ಯಾಂಡ್ ಕರ್ನಾಟಕ ಗೆದ್ದಿದೆ ಎಂದು ಎಐಸಿಸಿ ವರಿಷ್ಠ ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದ್ದಾರೆ.
ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ದೇಶಾದ್ಯಂತ ಭಾರತ್ ಜೋಡೋ ಯಾತ್ರೆ ಮೂಲಕ ಸಾಗಿದ ಪ್ರದೇಶಗಳಲ್ಲಿ ಬಹುತೇಕ ಎಲ್ಲಾ ಕಡೆಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ರಾಜ್ಯದಲ್ಲಿ ಯಾತ್ರೆ ಹೋದ ಶೇ.90ರಷ್ಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ತಿಳಿಸಿದರು.
ಇನ್ನು, ಸೋನಿಯಾ ಗಾಂಧಿ ರಾಜ್ಯ ಕಾಂಗ್ರೆಸ್ ಪಾಲಿಗೆ ಅದೃಷ್ಟದ ವ್ಯಕ್ತಿ ಎನಿಸಿದ್ದಾರೆ. ಅವರ ಆಶೀರ್ವಾದದಿಂದಲೇ ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ಗೆಲುವು ಸಾಧ್ಯವಾಗಿದೆ ಎಂದು ಸುರ್ಜೆವಾಲ ಹೇಳಿದರು.