×
Ad

ದ್ವೇಷ, ತಾರತಮ್ಯ ರಹಿತ ಸಾಮರಸ್ಯದ ಆಡಳಿತ ಕಾಂಗ್ರೆಸ್ ಗುರಿ: ಯು.ಟಿ.ಖಾದರ್

Update: 2023-05-16 14:14 IST

ಮಂಗಳೂರು, ಮೇ 16: ದ್ವೇಷ, ತಾರತಮ್ಯರಹಿತ ಸಾಮರಸ್ಯದ ಆಡಳಿತ ನಮ್ಮ ಗುರಿಯಾಗಿದೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಜೇತ ಅಭ್ಯರ್ಥಿ, ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆ ಸತ್ಯ-ಅಸತ್ಯ, ಪ್ರಚಾರ -ಅಪಪ್ರಚಾರ, ಜ್ಞಾನ-ಅಜ್ಞಾನದ ನಡುವೆ ನಡೆದಿದೆ. ಇದರಲ್ಲಿ ಸತ್ಯ, ಜ್ಞಾನ, ಸಾಮರಸ್ಯಕ್ಕೆ ಜಯವಾಗಿದೆ ಎಂದರು.

ರಾಜ್ಯದಲ್ಲಿ ಬಿಜೆಪಿಯ ದ್ವೇಷ, ಜನವಿರೋಧಿ ನೀತಿ ಜನರನ್ನು ಒತ್ತಡಕ್ಕೆ ಸಿಲುಕಿಸಿತ್ತು. ಜನರ ನೋವು ಸರ್ಕಾರದ ವಿರೋಧ ಮತ ಚಲಾ ಯಿಸುವಂತೆ ಮಾಡಿದೆ ಎಂದು ಅಭಿಪ್ರಾಯಸಿದ ಖಾದರ್, ಕಾಂಗ್ರೆಸ್ ಎಲ್ಲಾ ಗ್ಯಾರಂಟಿ ಯೋಜನೆ ಗಳನ್ನು ಅನುಷ್ಠಾನ ಮಾಡಲಿದೆ. ಪಕ್ಷದ ಗೆಲುವಿಗೆ ಕಾರಣರಾದ ಮತದಾರರಿಗೆ, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವುದಾಗಿ  ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಮುಹಮ್ಮದ್ ಮೋನು, ಶಾಹುಲ್ ಹಮೀದ್, ಶಶಿಧರ ಹೆಗ್ಡೆ, ಸದಾಶಿವ ಉಳ್ಳಾಲ, ಶುಭೋದಯ ಆಳ್ವ, ಶ್ಯಾಲೆಟ್ ಪಿಂಟೊ, ಮಮತಾ ಗಟ್ಟಿ, ಕವಿತಾ ಸನಿಲ್, ಅಪ್ಪಿ, ವಿ.ಎಸ್.ಅಬ್ದುಲ್ಲಾ, ಸಂತೋಷ್ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು.

Similar News