ನಿಟ್ಟೆ: 'ಕ್ರೀಡಾ ದೈಹಿಕ ಕ್ಷಮತೆ' ಕಾರ್ಯಾಗಾರ

Update: 2023-05-18 11:11 GMT

ಕೊಣಾಜೆ: ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ, ನಿಟ್ಟೆ ವಿಶ್ವವಿದ್ಯಾಲಯ ಆಶ್ರಯದಲ್ಲಿ, 'ಕ್ರೀಡಾ ದೈಹಿಕ ಕ್ಷಮತೆ' ಎಂಬ ವಿಷಯದ ಬಗ್ಗೆ ಎರಡು ದಿನಗಳ ಬೃಹತ್ ಕಾರ್ಯಾಗಾರ  ಗುರುವಾರ ನಡೆಯಿತು.

ಕಾರ್ಯಾಗಾರದ ಉದ್ಘಾಟನೆಯನ್ನು  ತೇಜಸ್ವಿನಿ ಆಸ್ಪತ್ರೆಯ ಮೂಳೆ ತಜ್ಞ ಡಾ. ಅಜಿತ್ ಅವರು ನೆರವೇರಿಸಿ ಮಾತನಾಡಿ,  ಕ್ರೀಡಾ ಫಿಸಿಯೋಥೆರಪಿ ಘಟಕದಲ್ಲಿ ದೈಹಿಕ ಕ್ಷಮತೆ ಮತ್ತು ಅದನ್ನು ಹಂತವಾಗಿ ಮೇಲ್ದರ್ಜೆಗೆ ಏರಿಸುವುದು ಬಹಳ ಮುಖ್ಯ ಎಂದು ತಿಳಿಸಿದರು.

ಕೆಎಸ್ ಹೆಗ್ಡೆ ಆಸ್ಪತ್ರೆಯ ಖ್ಯಾತ ಹೃದಯ ತಜ್ಞ ಡಾ. ಜಯಕೃಷ್ಣ ಅವರು ಅತಿಥಿಯಾಗಿದ್ದರು. ದಯಾನಂದ್ ಸಾಗರ್ ವಿಶ್ವ ವಿದ್ಯಾಲಯದ ಪ್ರೊ. ವಿನೋದ್ ಕುಮಾರ್ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿದ್ದರು.

ಫಿಸಿಯೋಥೆರಪಿ ಸಂಸ್ಥೆಯ ಪ್ರಾಂಶುಪಾಲ ಡಾ. ಧನೇಶೆ ಕುಮಾರ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ಸೌಮ್ಯ ಶ್ರೀವಾಸ್ತವ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಸುದೇಶ್ ಶೆಟ್ಟಿ, ಡಾ. ಶ್ರೀನಾಥ್ ಕಾಮತ್, ಡಾ. ಶ್ರೀನಿಕೆತನ್ , ಡಾ. ವಿದ್ಯಾ ಅಜಿಲ, ಕರ್ನಲ್ ಗಿವಾರಿ, ಡಾ.ರೇನಿಟ  ಅವರು ಭಾಗವಹಿಸಿದ್ದರು.

Similar News