×
Ad

ಶಾಸಕ ಯು.ಟಿ ಖಾದರ್‌ಗೆ ಇಂಟಕ್‌ನಿಂದ ಅಭಿನಂದನೆ

Update: 2023-05-18 22:12 IST

ಮಂಗಳೂರು, ಮೇ 18: ಮಂಗಳೂರು ವಿಧಾನ ಸಭಾ ಕ್ಷೇತ್ರದಿಂದ ಸತತ ಐದನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ  ಯು.ಟಿ ಖಾದರ್ ಅವರನ್ನು  ಮಂಗಳೂರು ವಿಧಾನ ಸಭಾ ಕ್ಷೇತ್ರದ ಇಂಟಕ್ ಅಭಿನಂದಿಸಿದೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ವಿಧಾನ ಸಭಾ ಕ್ಷೇತ್ರದ ಇಂಟಕ್ ಅಧ್ಯಕ್ಷೆ ಕಲಾವತಿ ಅವರು  ಖಾದರ್ ಅವರ ಗೆಲುವಿಗೆ ಶ್ರಮಿಸಿದ ಕಾರ್ಮಿಕ ಮತದಾರರಿಗೆ, ಇಂಟಕ್ ಉಳ್ಳಾಲ ಮತ್ತು ಮುಡಿಪು ಬ್ಲಾಕ್‌ನ ಪದಾಧಿಕಾರಿಗಳಿಗೆ  ಮತ್ತು  ಸದಸ್ಯರಿಗೆ , ಮಹಿಳಾ ಇಂಟಕ್ ಮತ್ತು ಯುವ ಇಂಟಕ್ ಘಟಕದ ಸದಸ್ಯರಿಗೆ ಇಂಟಕ್ ಮಂಗಳೂರು ಕೃತಜ್ಞತೆ ಸಲ್ಲಿಸಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಇಂಟಕ್ ಉಪಾಧ್ಯಕ್ಷ ಯೂಸುಫ್ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಎಂಕೆ ಹಿದಾಯತ್ ಮಾರಿಪಳ್ಳ, ಉಳ್ಳಾಲ ಬ್ಲಾಕ್‌ನ ಇಸ್ಮಾಯೀಲ್ ಮತ್ತು ಸುರೇಶ್ ಎಂ.ಎ. ಹಾಜರಿದ್ದರು.

Similar News