×
Ad

ವಿಧಾನಸಭೆಯಲ್ಲಿ ಕಾಂಗ್ರೆಸ್ ​ನವರಿಗೆ ತಕ್ಕ ಉತ್ತರ ಕೊಡಬಲ್ಲವನು ನಾನೊಬ್ಬನೆ: ಶಾಸಕ ಯತ್ನಾಳ್

''ಸ್ಪೀಕರ್ ಆಗಿ ಖಾದರ್ ಅಥವಾ ಝಮೀರ್ ಅವರೇ ಆಗಲಿ...''

Update: 2023-05-24 17:13 IST

ಬೆಂಗಳೂರು: 'ವಿಧಾನಸಭೆಯಲ್ಲಿ ಕಾಂಗ್ರೆಸ್​ನವರಿಗೆ ತಕ್ಕ ಉತ್ತರ ಕೊಡಬಲ್ಲವನು ನಾನೊಬ್ಬನೆ' ಎಂದು ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ನಾನು ಅಪೇಕ್ಷೆಪಟ್ಟಿಲ್ಲ, ಒಂದು ವೇಳೆ ವಿಪಕ್ಷ ನಾಯಕನಾಗಿ ಆಯ್ಕೆಯಾದರೆ ಕಾಂಗ್ರೆಸ್​ನವರಿಗೆ ತಕ್ಕ ಉತ್ತರ ಕೊಡಬಲ್ಲವನು ನಾನೊಬ್ಬನೆ. ನಾನು ವಿರೋಧ ಪಕ್ಷದ ನಾಯಕನಾದರೆ ವಿದಾನಸಭೆಯಲ್ಲಿ ಮಜಾ ಇರುತ್ತದೆ'' ಎಂದು ತಿಳಿಸಿದರು. 

'ಸ್ಪೀಕರ್ ಆಗಿ ಖಾದರ್ ಅಥವಾ ಝಮೀರ್ ಅವರೇ ಆಗಲಿ, ಅವರು ಸಂವಿಧಾನದಂತೆಯೇ ನಡೆಯಬೇಕಾಗುತ್ತದೆ' ಎಂದು ಪ್ರಶ್ನೆಯೊಂದಕ್ಕೆ ಯತ್ನಾಳ್ ಪ್ರತಿಕ್ರಿಯಿಸಿದರು.  

Similar News