ನಗರದಲ್ಲಿ 48 ಮರು ಬಳಕೆ ವಸ್ತುಗಳ ಸಂಗ್ರಹಣೆ ಕೇಂದ್ರಗಳನ್ನು ತೆರೆದ ಬಿಬಿಎಂಪಿ

Update: 2023-05-24 17:47 GMT

ಬೆಂಗಳೂರು, ಮೇ 24: ಸ್ವಚ್ಚ ಸರ್ವೆಕ್ಷಣ್-2023 ಅಡಿ ‘ನನ್ನ ಜೀವನ, ನನ್ನ ಸ್ವಚ್ಚ ನಗರ’ ಕಾರ್ಯಕ್ರಮದಡಿ ಸಂಗ್ರಹಿಸುವ ಮರು ಬಳಸಬಹುದಾದಂತಹ ವಸ್ತುಗಳ ಸಂಗ್ರಹಿಸುವ 48  ಕೇಂದ್ರಗಳನ್ನು ನಗರದಲ್ಲಿ ತೆರೆಯಲಾಗಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ್ ಮಿಷನ್(ನಗರ) 2.0 ಯೋಜನೆಯಡಿ ಸ್ವಚ್ಚತೆಯ ಕುರಿತು  ರಾಷ್ಟ್ರಮಟ್ಟದಲ್ಲಿ ಪರಿಣಾಮ ಬೀರುವ ಅಭಿಯಾನವನ್ನು ಪ್ರಾರಂಬಿಸಿದೆ. ಇದರ ಸಲುವಾಗಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ನೀರುಪಯುಕ್ತ ಆಟಿಕೆ ವಸ್ತುಗಳು, ಬಳಸಿದ ಬಟ್ಟೆ, ದಿನಪತ್ರಿಕೆಗಳು, ಹಳೆಯ ಪುಸ್ತಕಗಳು, ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಂತಹ 6 ಬಗೆಯ ನವೀಕರಿಸಿ ಮರು ಬಳಸುವಾದಂತಹ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ನಿರ್ಧರಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಸಿಸುವ ನಾಗರೀಕರು ನವೀಕರಿಸಿ ಮರು ಬಳಸುವಾದಂತಹ ವಸ್ತುಗಳನ್ನು ಹತ್ತಿರದ ಕೇಂದ್ರಗಳಿಗೆ ನೀಡಬೇಕು ಎಂದು ಬಿಬಿಎಂಪಿ ಪ್ರಕಟನೆಯಲ್ಲಿ ತಿಳಿಸಿದೆ.

Similar News