ಇಂದು 24 ಸಚಿವರ ಪ್ರಮಾಣವಚನ | ರಾಜಭವನದ ಸುತ್ತಮುತ್ತ ಮಾರ್ಗ ಬದಲಾವಣೆ; ಇಲ್ಲಿದೆ ವಿವರ

Update: 2023-05-27 04:42 GMT

ಬೆಂಗಳೂರು: ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್‌ ಹೈಕಮಾಂಡ್‌ ಹಸಿರು ನಿಶಾನೆ ತೋರಿದೆ. ಅದರಂತೆ ಇಂದು (ಶನಿವಾರ)  ರಾಜಭವನದಲ್ಲಿ ನೂತನ ಸಚಿವರುಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಸಂಚಾರ ಬಂದೋಬಸ್ತ್ ಗಾಗಿ ರಸ್ತೆ ಮಾರ್ಗ ಬದಲಾವಣೆ ಮಾಡಿ ಪೊಲೀಸರು ಸೂಚನೆ ನೀಡಿದ್ದಾರೆ. 

ರಾಜಭವನದ ಸುತ್ತಮುತ್ತ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾರ್ಗ ಬದಲಾವಣೆಯಾಗಲಿದ್ದು, ವಿವರ ಈ ಕೆಳಗಿನಂತಿದೆ.

ಕೆ.ಆರ್.ವೃತ್ತದಿಂದ ಗೋಪಾಲಗೌಡ ವೃತ್ತದವರೆಗೆ ಸಂಚಾರ ಬಂದ್​ ಆಗಲಿದೆ. ಅಲ್ಲದೇ ನೃಪತುಂಗ ರಸ್ತೆ ಅಥವಾ ಕಬ್ಬನ್​ಪಾರ್ಕ್​ ಒಳಭಾಗದ ರಸ್ತೆಯಲ್ಲಿ ಸಂಚಾರಕ್ಕೆ ಅನುಮತಿಸಲಾಗಿದೆ.

ಬಾಳೇಕುಂದ್ರಿ ವೃತ್ತದಿಂದ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದ್ದು, ಕಾಫಿ ಬೋರ್ಡ್ ಅಥವಾ ತಿಮ್ಮಯ್ಯ ವೃತ್ತದ ಕಡೆ ಸಂಚಾರ ನಿರ್ಬಂಧ ಹೇರಲಾಗಿದೆ. ಜೊತೆಗೆ ಪೊಲೀಸ್ ತಿಮ್ಮಯ್ಯ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಸಂಚಾರ ಸಂಪೂರ್ಣ ಬಂದ್ ಆಗಲಿದೆ.

ಶಿವಾಜಿನಗರ ಬಸ್ ನಿಲ್ದಾಣದಿಂದ ಬರುವ ವಾಹನಗಳ ಹಾಗೂ ಕ್ವೀನ್ಸ್ ಸರ್ಕಲ್, ಸಿದ್ದಲಿಂಗಯ್ಯ ವೃತ್ತದ ಕಡೆಗೆ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ರಾಜಭವನ, ಕಾಫಿಬೋರ್ಡ್​ ಕಡೆಗೆ ಗೂಡ್ಸ್​ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.

► ಈ ಕೆಳಕಂಡ ರಸ್ತೆಗಳಲ್ಲಿ ಯಾವುದೇ ವಾಹನ ನಿಲುಗಡೆ ಇರುವುದಿಲ್ಲ.

ರಾಜಭವನ ರಸ್ತೆ, ಅಂಬೇಡ್ಕರ್ ರಸ್ತೆ, ಕ್ವೀನ್ಸ್ ರಸ್ತೆ, ಇನ್​ಫೆಂಟ್ರಿ ರಸ್ತೆ, ಸ್ಯಾಂಕಿ ರಸ್ತೆ, ಪ್ಯಾಲೇಸ್​ ರಸ್ತೆ, ಕಬ್ಬನ್​ ರಸ್ತೆಯಲ್ಲಿ ನಿಲುಗಡೆ ನಿಷೇಧ ಮಾಡಲಾಗಿದೆ.


 

Similar News