ಮಂಗಳೂರು: ಜೂನ್ 1ರಿಂದ ಸೆಪ್ಟಂಬರ್ 30ರವರೆಗೆ ಸಾರ್ವಜನಿಕ ರಸ್ತೆ ಅಗೆಯುವುದಕ್ಕೆ ಮನಪಾ ನಿಷೇಧ

Update: 2023-05-30 10:27 GMT

ಮಂಗಳೂರು, ಮೇ 30: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜೂನ್ 1ರಿಂದ ಸೆಪ್ಟಂಬರ್ 30ರವರೆಗೆ ಯಾವುದೇ ಉದ್ದೇಶಕ್ಕೆ ಸಾರ್ವಜನಿಕ ರಸ್ತೆಯನ್ನು ಅಗೆಯುವಂತಿಲ್ಲ ಎಂದು ಪಾಲಿಕೆ ತಿಳಿಸಿದೆ.

ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಮಂಗಳೂರು ಮನಪಾ ಆಯುಕ್ತ, ಮಳೆಗಾಲ ಆರಂಭ ಕಾಲ ಸನ್ನಿಹಿತವಾಗುತ್ತಿರುವುದರಿಂದ ಜೂನ್ 1ರಿಂದ ಸೆಪ್ಟಂಬರ್ 30ರ ವರೆಗೆ ನಳ್ಳಿ ನೀರಿನ ಜೋಡಣೆ, ಒಳಚರಂಡಿ ಜೋಡಣೆ, ವಿದ್ಯುತ್ ಸಂಪರ್ಕ ಹಾಗೂ ಇನ್ನಿತರ ಯಾವುದೇ ಉದ್ದೇಶಕ್ಕೆ ಸಾರ್ವಜನಿಕ ರಸ್ತೆಯನ್ನು ಕಡಿತಗೊಳಿಸುವುದನ್ನು ನಿಷೇಧಿಸಲಾಗಿದೆ. ರಸ್ತೆ ಕಡಿತಗೊಳಿಸುವುದು ಕಂಡುಬಂದಲ್ಲಿ ಕೆ.ಎಂ.ಸಿ. ಕಾಯ್ದೆಯಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Similar News