×
Ad

ಮಂಗಳೂರು: ಜೂನ್ 2ರಿಂದ 4ರವರೆಗೆ ನೀರು ಪೂರೈಕೆ ಸ್ಥಗಿತ

Update: 2023-05-30 19:33 IST

ಮಂಗಳೂರು, ಮೇ 30: ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ-ಬೆಂದೂರ್‌ವೆಲ್- ಪಣಂಬೂರು 1000 ಎಂಎಂ ವ್ಯಾಸ ಕೊಳವೆಯನ್ನು ಅಡ್ಯಾರ್ ಕಟ್ಟೆಯ ಬಳಿ ಬಲಪಡಿಸುವ ಕಾಮಗಾರಿ ಹಾಗೂ ಕೊಟ್ಟಾರ ಚೌಕಿ ಬಳಿ ಕೆಯುಐಡಿಎಫ್‌ಸಿ ವತಿಯಿಂದ 900 ಎಂಎಂ ವ್ಯಾಸ ಕೊಳವೆಯ ಮರುಜೋಡಣೆ ಕಾಮಗಾರಿಯ ಹಿನ್ನೆಲೆಯಲ್ಲಿ ಜೂನ್ 2ರ ಬೆಳಗ್ಗೆ 6 ರಿಂದ ಜೂನ್ 4ರ ಬೆಳಗ್ಗೆ 6ರವರೆಗೆ ನಗರದ ಕೆಲವು ಕಡೆಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಂಗಳೂರು ಮನಪಾ ಪ್ರಕಟನೆಯಲ್ಲಿ ತಿಳಿಸಿದೆ.

ನಗರದ ಬೆಂದೂರ್‌ವೆಲ್ ಲೋ ಲೆವೆಲ್ ಪ್ರದೇಶಗಳಾದ ಪಿವಿಎಸ್, ಲೇಡಿಹಿಲ್, ಬಂದರು, ಬಿಜೈ, ಸೂಟರ್‌ಪೇಟೆ, ಮೇರಿಹಿಲ್, ಪಚ್ಚನಾಡಿ, ಅಶೋಕನಗರ, ದೇರೆಬೈಲ್, ಕೊಡಿಯಾಲಬೈಲು, ಕದ್ರಿ, ನಾಗುರಿ, ಸುರತ್ಕಲ್, ಕಾಟಿಪಳ್ಳ, ಕೂಳೂರು, ಜಲ್ಲಿಗುಡ್ಡೆ, ಕೋಡಿಕಲ್ ಭಾಗಶಃ, ಕಾನ, ಬಾಳ, ಕುಳಾಯಿ, ಮುಕ್ಕ, ಪಣಂಬೂರು ಮತ್ತಿತರ ಕಡೆ ಸಂಪೂರ್ಣವಾಗಿ ನೀರು ಸರಬರಾಜು ನಿಲ್ಲಿಸಲಾಗುವುದು ಎಂದು ತಿಳಿಸಿದೆ.

Similar News