​ಪ್ರತ್ಯೇಕ ಪ್ರಕರಣ: 2 ಬೈಕ್‌ಗಳ ಕಳವು

Update: 2023-06-01 17:06 GMT

ಮಂಗಳೂರು, ಜೂ.1: ನಗರ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಬೈಕ್‌ಗಳು  ಕಳವಾಗಿರುವ ಬಗ್ಗೆ ಪೊಲೀಸರಿಗೆ  ದೂರು ದಾಖಲಾಗಿದೆ.

ಮೇ 23ರಂದು ಮಧ್ಯಾಹ್ನ 2:45ಕ್ಕೆ  ಗಣೇಶ್ ಎಂಬವರು ಕುಂಟಿಕಾನದ ಬಿಎಂಎಸ್ ಹೋಟೆಲ್ ಎದುರುಗಡೆ ಬೈಕ್  ನಿಲ್ಲಿಸಿ ಪಕ್ಕದ ಶೋರೂಂ ಒಂದಕ್ಕೆ ಕೆಲಸಕ್ಕೆ ಹೋಗಿದ್ದಾರೆ. ಸಂಜೆ 6 ಗಂಟೆಗೆ ವಾಪಾಸು ಬಂದು ನೋಡಿದಾಗ ನಿಲ್ಲಿಸಿದ ಸ್ಥಳದಲ್ಲಿ ಬೈಕ್  ಇರಲಿಲ್ಲ. ಕಳವಾದ ಬೈಕ್‌ನ  ಮೌಲ್ಯ 75 ಸಾವಿರ ರೂ. ಎಂದು ಅಂದಾಜಿಸಲಾಗಿದ್ದು, ಈ ಕುರಿತಂತೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಮೇ 11ರಂದು ಸಂಜೆ 6ಗಂಟೆಯಿಂದ ಮೇ 12ರ ಬೆಳಗ್ಗೆ 7:15ರ ಮಧ್ಯದ ಅವಧಿಯಲ್ಲಿ ಹಂಪನಕಟ್ಟೆಯ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿದ್ದ ವಿಶ್ವನಾಥ್ ಧನ್ರಾಜ್ ಓಲೇಕರ್ ಎಂಬವರಿಗೆ ಸೇರಿದ ಪಲ್ಸರ್ ಬೈಕ್ ಕಳುವಾಗಿದೆ. ಕಳವಾದ ಬೈಕ್‌ನ ಮೌಲ್ಯ  75 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News