ಡೆಂಗ್, ಮಲೇರಿಯಾ ಬಗ್ಗೆ ಮುನ್ನೆಚ್ಚರಿಕೆ ಇರಲಿ: ಡಾ. ಕುಮಾರ್

Update: 2023-06-06 13:25 GMT

ಮಂಗಳೂರು: ಮಲೇರಿಯಾ ಮತ್ತು ಡೆಂಗ್ ಪ್ರಕರಣಗಳು ಜೂನ್-ಜುಲೈನಲ್ಲಿ ಅತಿ ಹೆಚ್ಚು ವರದಿಯಾಗುವ ಹಿನ್ನಲೆಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಬೇಕು ಎಂದು ದ.ಕ.ಜಿಪಂ ಸಿಇಒ ಡಾ. ಕುಮಾರ್ ನಿರ್ದೇಶನ ನೀಡಿದರು.

ಮಲೇರಿಯಾ ಹಾಗೂ ಡೆಂಗ್ ನಿಯಂತ್ರಣ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ದ.ಕ. ಜಿಪಂನ ವೀಡಿಯೋ ಕಾನ್ಫರೆನ್ಸ್ ಹಾಲ್‌ನಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತೆಂಗಿನಚಿಪ್ಪು, ಟಯರ್, ಟ್ಯೂಬ್, ಪ್ಲಾಸ್ಟಿಕ್ ಸಹಿತ ಸೊಳ್ಳೆಗಳು ಉತ್ಪತ್ತಿಯಾಗುವ ತ್ಯಾಜ್ಯಗಳ ಮೂಲವನ್ನು ಸಮರ್ಪಕ ನಿರ್ವಹಣೆ ಮಾಡಬೇಕು. ಮನೆಯ ಸುತ್ತಮತ್ತ, ತಾರಸಿ ಹಾಗೂ ಹೂ ಕುಂಡಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ನೀರು ಶೇಖರಣಾ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳಗಳನ್ನು ಭದ್ರವಾಗಿಡಬೇಕು. ಇದ ರೊಂದಿಗೆ ಶುದ್ಧ ಕುದಿಸಿದ ನೀರನ್ನೇ ಕುಡಿಯುವ ಮೂಲಕ ಡೆಂಗ್- ಮಲೇರಿಯಾ ಬಾರದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ಕುಮಾರ್ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ. ಕಿಶೋರ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಮತ್ತು ವೆನ್‌ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸದಾಶಿವ್ ಶಾನುಭೋಗ್, ಮಲೇರಿಯಾ ನಿಯಂತ್ರಣಾಧಿ ಕಾರಿ ಡಾ.ನವೀನ್ ಕುಲಾಲ್, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ, ಖಾಸಗಿ ವೈದ್ಯಕೀಯ ಕಾಲೇಜಿನ ಮುಖ್ಯಸ್ಥರು ಉಪಸ್ಥಿತರಿದ್ದರು.

Similar News