ಗಲ್ಫ್ ರಾಷ್ಟ್ರಗಳ ಮಾರುಕಟ್ಟೆಗೆ​ ಲಗ್ಗೆ ಇಟ್ಟ ‘ಹನ’

ಸೌದಿ ಬಳಿಕ ದುಬೈಯಲ್ಲೂ ​ನೈಸರ್ಗಿಕ ಮತ್ತು ಆರೋಗ್ಯಕರ ಸಾಫ್ಟ್ ಡ್ರಿಂಕ್ಸ್ ಲಭ್ಯ

Update: 2023-06-07 16:23 GMT

ಬೆಂಗಳೂರು, ಜೂ.7:​ ಕರ್ನಾಟಕದ ಪ್ರಖ್ಯಾತ ಸಾಫ್ಟ್ ಡ್ರಿಂಕ್ ಬ್ರ್ಯಾಂಡ್ ‘ಸ್ವದೇಶಿ ಫುಡ್ ಆ್ಯಂಡ್ ಬೆವರೇಜಸ್’ ಕಂಪೆನಿ​ಯ ​​‘ಹನ’ ನೈಸರ್ಗಿಕ ಮತ್ತು ಆರೋಗ್ಯಕರ ಸಾಫ್ಟ್ ಡ್ರಿಂಕ್ಸ್​ ಶೀಘ್ರ​ವೇ​​ ಗಲ್ಫ್ ರಾಷ್ಟ್ರಗಳ ಮಾರುಕಟ್ಟೆಗಳಲ್ಲಿ​ ಲಭ್ಯವಾಗಲಿದೆ ಎಂದು ಕಂಪೆನಿಯ ​ಪ್ರಕಟನೆ ತಿಳಿಸಿದೆ.

ಈಗಾಗಲೆ ಸೌದಿ ಅರೇಬಿಯಾದ ಪ್ರಮುಖ ಮಾರುಕಟ್ಟೆಗಳಿಗೆ ​​​‘ಹನ’ ​ಸಾಫ್ಟ್ ಡ್ರಿಂಕ್ಸ್ ರಫ್ತು ಆಗುತ್ತಿದ್ದು, ಶೀಘ್ರ ದುಬೈಯ ಮಾರುಕಟ್ಟೆಗಳಲ್ಲಿ ಕೂಡ ‘ಹನ’ ಲಭ್ಯವಾಗಲಿದೆ.

2015ರಲ್ಲಿ ಬೆಂಗಳೂರಿನಲ್ಲಿ ‘ಸ್ವದೇಶಿ ಫುಡ್ ಆ್ಯಂಡ್ ಬೆವರೇಜಸ್’ ಕಂಪೆನಿಯು ಆರಂಭಿಸಿದ ​​​‘ಹನ’ ನೈಸರ್ಗಿಕ ಮತ್ತು ಆರೋಗ್ಯಕರ ಸಾಫ್ಟ್ ಡ್ರಿಂಕ್ಸ್‌ನ ಪ್ಲಾಂಟ್ ಬೆಂಗಳೂರು ಮತ್ತು ಮೈಸೂರಿನಲ್ಲಿವೆ.​

ಈಗ ವ್ಯಾಪಕ ಜನಪ್ರಿಯತೆ ಗಳಿಸುತ್ತಿರುವ ​​‘ಹನ’ ಬ್ರ್ಯಾಂಡ್ ಅನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ಮುಂದಿನ ಹಂತದಲ್ಲಿ ಅಹ್ಮದಾಬಾದ್ ಮತ್ತು ಮಂಗಳೂರಿನಲ್ಲಿ​ ಉತ್ಪಾದನಾ​ ಪ್ಲಾಂಟ್ ತೆರೆಯಲು ಸಿದ್ಧತೆ ನಡೆಸಲಾಗಿದೆ.

‘ಹನ’ ಉತ್ಪನ್ನಗಳು ಆರೋಗ್ಯಕರ ಮತ್ತು ನೈಸರ್ಗಿಕವಾಗಿದೆ. ​ಅವುಗಳಲ್ಲಿ ​ಯಾವುದೇ ​ಅಲ್ಕೋಹಾಲಿಕ್ ಮಿಶ್ರಣವಿಲ್ಲ. ಸ್ವಾದಿಷ್ಟಕರವಾದ ​​​‘ಹನ’ ಪಾನೀಯಗಳು ಕರ್ನಾಟಕವಲ್ಲದೆ ಕೇರಳ, ತಮಿಳ್ನಾಡು, ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಒರಿಸ್ಸಾ ರಾಜ್ಯಗಳ ಬಹುತೇಕ ಪ್ರಮುಖ ನಗರಗಳ ಗ್ರಾಹಕ​​ರನ್ನು ಆಕರ್ಷಿಸಿವೆ.​

ಕರಾವಳಿ ಕರ್ನಾಟಕದಲ್ಲಿ ಹನ ಈಗಾಗಲೇ ಮನೆಮಾತಾಗಿರುವ ಸಾಫ್ಟ್ ಡ್ರಿಂಕ್. ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪೆನಿಗಳ ಸಾಫ್ಟ್ ಡ್ರಿಂಕ್ ​ಗಳಿಗೆ ಪೈಪೋಟಿ ಒಡ್ಡುವಷ್ಟು ಜನಜನಿತವಾಗಿದೆ ​​‘ಹನ’. 

170 ಮಿ.ಲೀ.ನಿಂದ 2 ಲೀ.ವರೆಗಿನ ​​​‘ಹನ’ ಜಿಂಜರ್, ಲೆಮನ್, ಕೊ​ಕಂ​, ಮಿಂಟ್ ಲೆಮನ್, ​ಟ್ಯಾಮರಿಂಡ್, ಜೀರಾ, ಗ್ರೇಪ್​,​ ​ಲೀಚ್ಚಿ, ಸ್ವೀಟ್ ಲಸ್ಸಿ,​ ಫಿಜ್ಹ್ ಜೀರಾ, ಮ್ಯಾಂಗೋ, ಗಾವಾ, ಬಟರ್ ಮಿಲ್ಕ್, ... ಹೀಗೆ ವಿವಿಧ ಬಗೆಯ 12​ ಕ್ಕೂ ಹೆಚ್ಚು​ ಸ್ವಾದಿಷ್ಟ ಪೇಯ​ಗಳು ​​‘ಹನ’  ಬ್ರ್ಯಾಂಡ್ ನಲ್ಲಿ ಲಭ್ಯ​ ಇವೆ.

​ರೈತ ಮಿತ್ರ ಬ್ರ್ಯಾಂಡ್ ​​‘ಹನ’

‘ನಮ್ಮದು ರೈತ ಮಿತ್ರ ಸಂಸ್ಥೆಯಾಗಿದೆ. ವಿವಿಧ ಬಗೆಯ ಸ್ವಾದಿಷ್ಟ ಪೇಯಗಳ ತಯಾರಿಗೆ ಬೇಕಾದ ಲಿಂಬೆ, ಶುಂಠಿ, ಪುದಿನ, ದ್ರಾ​ಕ್ಷಿ ಇತ್ಯಾದಿಗಳನ್ನು ನಾವು ನೇರವಾಗಿ ರೈತರಿಂದಲೇ ಖರೀದಿಸುತ್ತೇವೆ. ​ಯಾವ  ಕಾರಣಕ್ಕೂ ಮಧ್ಯವರ್ತಿಗಳಿಗೆ ಅವಕಾಶ ನೀಡುವುದಿಲ್ಲ. ಆರ್ಥಿಕವಾಗಿ ಸಂಸ್ಥೆಯ ಬೆಳವಣಿಗೆಯ ಜೊತೆಗೆ ರೈತರು ಕೂಡ ಸ್ವಾವಲಂಬಿಯಾಗಬೇಕು ಎಂಬುದು ನಮ್ಮ ಅಭಿಲಾಶೆಯಾಗಿದೆ’ ಎಂದು ಕಂಪೆನಿಯ ಪ್ರವರ್ತಕರು ತಿಳಿಸಿದ್ದಾರೆ.

‘ನೈಸರ್ಗಿಕವಾದ ನಮ್ಮ ಪಾನೀಯಗಳಿಗೆ​ ಯಾವುದೇ ಕೃತಕ ಟೇಸ್ಟಿಂಗ್ ಪೌಡರ್ ಅಥವಾ​ ಅಮಲು ದ್ರವ್ಯ ಬೆರೆಸುವುದಿಲ್ಲ. ಜನರ ಆರೋಗ್ಯದ ಹಿತದೃಷ್ಟಿಯಿಂದ ನಿಸರ್ಗದತ್ತವಾದ ಸಾಮಗ್ರಿಗಳನ್ನು ಮಾತ್ರ ಬಳಸುತ್ತೇವೆ. ಈ ವರ್ಷದ ಫೆಬ್ರವರಿಯಲ್ಲಿ ದುಬೈಯಲ್ಲಿ ಸಾಫ್ಟ್ ಡ್ರಿಂಕ್ಸ್‌ನ​ ಪ್ರತಿಷ್ಠಿತ ​"ಗಲ್ಫ್ ಫುಡ್" ಮೇಳವೊಂದು ನಡೆದಿತ್ತು. ಅದರಲ್ಲಿ ​ಜಗತ್ತಿನ 155 ರಾಷ್ಟ್ರಗಳ ಪ್ರಮುಖ ಕಂಪೆನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ​ಆ  ಕಂಪೆನಿಗಳ ಪ್ರತಿನಿಧಿಗಳು ನಮ್ಮ ಪಾನೀಯಗಳ ರುಚಿ ಸವಿದು ಸಂತಸ ವ್ಯಕ್ತಪಡಿಸಿದರು. ಅಲ್ಲದೆ ಜಗತ್ತಿನ ಹಲವು ದೇಶಗಳ ಮಾರುಕಟ್ಟೆಯಲ್ಲಿ ​​​‘ಹನ’ ಉತ್ಪನ್ನಗಳನ್ನು ಪರಿಚಯಿಸಲು ಆಸಕ್ತಿ ತೋರಿ​ ಆಹ್ವಾನ ನೀಡಿ​ದರು.

ಈ ನಿಟ್ಟಿನಲ್ಲಿ ನಾವು ಗಲ್ಫ್ ರಾಷ್ಟ್ರಗಳ ಮಾರುಕಟ್ಟೆ ಪ್ರವೇಶಿಸಲು ಮೊದಲ ಆದ್ಯತೆ ನೀಡಿದೆವು. ಈಗಾಗಲೆ ಸೌದಿ ಅರೇಬಿಯಾದ ಮಾರುಕಟ್ಟೆ ಪ್ರವೇಶಿಸಿದ್ದೇವೆ.​ ಅಲ್ಲಿಗೆ ​ ಹೇರಳ ಪ್ರಮಾಣದಲ್ಲಿ ​​​‘ಹನ’  ಉತ್ಪನ್ನಗಳು ರಫ್ತಾಗುತ್ತಿವೆ. ಎರಡು ವಾರ​ಗಳಲ್ಲಿ ದುಬೈಯ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದೇವೆ. ಮುಂದಿನ ಎರಡು ತಿಂಗಳಲ್ಲಿ ಗಲ್ಫ್ ರಾಷ್ಟ್ರಗಳ ಎಲ್ಲಾ ಮಾರುಕಟ್ಟೆಗಳಲ್ಲಿ ​​​‘ಹನ’ ಉತ್ಪನ್ನಗಳು ಗ್ರಾಹಕರ ಕೈಗೆ ಸಿಗುವಂತಹ ಯೋಜನೆ ರೂಪಿಸಿದ್ದೇವೆ’ ಎಂದು ‘ಸ್ವದೇಶಿ ಫುಡ್ ಆ್ಯಂಡ್ ಬೆವರೇಜಸ್’ನ ಪ್ರವರ್ತಕರು ತಿಳಿಸಿದ್ದಾರೆ.

Similar News