ಕಂಕನಾಡಿ ಇನ್ಸ್ಪಾಯರ್ ಕೋಚಿಂಗ್ ಸೆಂಟರ್: ವಿಶ್ವ ಪರಿಸರ ದಿನಾಚರಣೆ

Update: 2023-06-08 09:35 GMT

ಮಂಗಳೂರು : ಕಂಕನಾಡಿ  ಇನ್ಸ್ಪಾಯರ್ ಕೋಚಿಂಗ್ ಸೆಂಟರ್ ಕ್ಯಾಂಪಸ್ ಗಾರ್ಡನ್ ನಲ್ಲಿ  ಹೊಸ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.

ಕೋಚಿಂಗ್ ಸೆಂಟರ್ ಮುಖ್ಯಸ್ಥ ಮಹಮ್ಮದ್ ಇಸ್ತಿಕಾರ್ ಸಸ್ಯಗಳಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.  

ವಿದ್ಯಾರ್ಥಿಗಳಿಂದ ಸ್ವರಚಿತ ಬಹುಭಾಷಾ  ಪರಿಸರ ಜಾಗೃತಿ ಹಾಡು ಹಾಗೂ ಜಾಥಾ ಏರ್ಪಡಿಸಲಾಗಿತ್ತು.‌ ವಿಜ್ಞಾನದ ವಿಭಾಗದ ಉಪನ್ಯಾಸಕಿ ಸುಮನ ಶೆಣೈ ಸ್ವಾಗತಿಸಿ, ನವ್ಯಾ ಕಾರ್ಯಕ್ರಮ ನಿರೂಪಿಸಿದರು.

Similar News