ಸ್ಕೇಟಿಂಗ್ ಸ್ಪರ್ಧೆ: ಆರ್ನಾ ರಾಜೇಶ್ ದ್ವಿತೀಯ ಸ್ಥಾನ

Update: 2023-06-08 14:48 GMT

ಮಂಗಳೂರು, ಜೂ.8: ಇಂಡಿಯಾ ಸ್ಕೇಟ್ ವತಿಯಿಂದ ಜೂ.1ರಿಂದ 5ರವರೆಗೆ ಝಾರ್ಖಂಡ್‌ನ ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ನಗರದ ಕದ್ರಿ ರೋಲರ್ಸ್ ಸ್ಕೇಟಿಂಗ್ ಕ್ಲಬ್ ಸದಸ್ಯೆ ಆರ್ನಾ ರಾಜೇಶ್ ದ್ವಿತೀಯ ಸ್ಥಾನ ಪಡೆದಿದ್ದಾರೆ.

7 ರಿಂದ 9ರ ವಯೋಮಾನದ ಟು ಲ್ಯಾಪ್ಸ್ ರೋಡ್ ರೇಸ್ ಬಾಲಕಿಯರ ಸ್ಕೇಟಿಂಗ್‌ನಲ್ಲಿ ಆರ್ನಾ ರಾಜೇಶ್ ಪ್ರಬಲ ಸ್ಪರ್ಧೆಯೊಡ್ಡಿ ಅಂತಿಮವಾಗಿ ದ್ವಿತೀಯ ಸ್ಥಾನಿಯಾಗಿ ಬೆಳ್ಳಿ ಪದಕ ಪಡೆದರು.

ಆರ್ನಾ ರಾಜೇಶ್ ಕದ್ರಿ ಹಿಲ್ಸ್‌ನ ವೈದ್ಯರಾದ ಡಾ.ರಾಜೇಶ್ ಹುಕ್ಕೇರಿ-ಡಾ.ಅನಿತಾ ರಾಜೇಶ್ ದಂಪತಿಯ ಪುತ್ರಿಯಾಗಿದ್ದಾರೆ. ಪ್ರಸ್ತುತ ಆರ್ನಾ ಬಿಜೈಯ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ 3ನೇ ತರಗತಿ ವಿದ್ಯಾರ್ಥಿನಿ ಯಾಗಿದ್ದಾರೆ. ಬೆಂಗಳೂರಿನ ಸ್ಕೇಟಿಂಗ್ ತರಬೇತಿಯ ಮುಖ್ಯ ಕೋಚ್ ಪ್ರತೀಕ್ ರಾಜಾ ಹಾಗೂ ಸಹ ಕೋಚ್ ತೇಜಸ್ವಿನಿ ಕನ್ಬಿಲ್ ಅವರ ಗರಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆರ್ನಾ ರಾಜೇಶ್ 2023ನೇ ಸಾಲಿನ ಹೊಯ್ಸಳ ಹಾಗೂ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾಗಿದ್ದರು.

Similar News