ಪುರುಷ ನೌಕರರಿಗೂ ಶಿಶುಪಾಲನಾ ರಜೆ ಸೌಲಭ್ಯ; ರಾಜ್ಯ ಸರಕಾರ ಆದೇಶ

Update: 2023-06-09 18:22 GMT

ಬೆಂಗಳೂರು, ಜೂ. 9: ಒಂಟಿ ಪೋಷಕರಾಗಿರುವ ರಾಜ್ಯ ಸರಕಾರಿ ಪುರುಷ ನೌಕರರಿಗೂ ಗರಿಷ್ಠ 6 ತಿಂಗಳ ಅವಧಿಗೆ ಅಂದರೆ ಒಟ್ಟು 180 ದಿನಗಳಿಗೆ ಮೀರದಂತೆ ಶಿಶುಪಾಲನಾ ರಜೆ ಸೌಲಭ್ಯ ಮಂಜೂರು ಮಾಡಲು ರಾಜ್ಯ ಸರಕಾರ ಶುಕ್ರವಾರ ಅಧಿಕೃತ ಆದೇಶ ಹೊರಡಿಸಿದೆ.

ಒಂಟಿ ಪೋಷಕರಾಗಿರುವ ಅವಿವಾಹಿತ/ವಿವಾಹ ವಿಚ್ಛೇದಿತ/ವಿಧುರ ಪುರುಷ ರಾಜ್ಯ ಸರಕಾರ ನೌಕರರಿಗೂ ಅವರ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳಿಗೆ ಮೀರದಂತೆ ರಜೆ ಸೌಲಭ್ಯ ಮಂಜೂರು ಮಾಡಲಾಗಿದೆ. ಶಿಶುಪಾಲನಾ ರಜೆ ಪಡೆದ ಅವಧಿಯಲ್ಲಿ ಸಂಬಂಧಿತ ಪುರುಷ ನೌಕರರು ವಿವಾಹ ಮಾಡಿಕೊಂಡಲ್ಲಿ ಆ ದಿನಾಂಕದಿಂದ ಶಿಶುಪಾಲನಾ ರಜೆಯು ತಾನಾಗಿಯೇ ರದ್ದುಗೊಳ್ಳುತ್ತದೆ ಎಂದು ಆರ್ಥಿಕ ಇಲಾಖೆ ಅಧೀನ ಕಾರ್ಯದರ್ಶಿ ಅಜಯ್ ಎಸ್. ಕೊರಡೆ ಆದೇಶ ಹೊರಡಿಸಿದ್ದಾರೆ.

Similar News