×
Ad

ಸದರ್ ಮುಹಲ್ಲಿಂ ಸಂಗಮ: ನೂತನ ಸ್ಪೀಕರ್ ಯುಟಿ ಖಾದರ್‌ಗೆ ಸನ್ಮಾನ

Update: 2023-06-12 21:56 IST

ಉಪ್ಪಿನಂಗಡಿ: ಧಾರ್ಮಿಕ ಶಿಕ್ಷಣ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆ ಪಡೆದ ಸಮಸ್ತ ಇಸ್ಲಾಮಿಕ್ ಮತ ವಿಧ್ಯಾಬ್ಯಾಸ ಬೋರ್ಡ್ ಅಧೀನದ ಜಂಹಿಯ್ಯತ್ತುಲ್ ಮುಹಲ್ಲಿಮೀನ್ ದ.ಕ. ಜಿಲ್ಲಾ ಸಮಿತಿಯ ಆಶ್ರಯಲ್ಲಿ ಮದ್ರಸ ಕ್ಷೇತ್ರಕ್ಕೆ ಶಕ್ತಿ ತುಂಬುವ ಸಲುವಾಗಿ ಸದರ್ ಮುಹಲ್ಲಿಂ ಸಂಗಮ  ಸೋಮವಾರ ಉಪ್ಪಿನಂಗಡಿಯ ಎಚ್‌ಎಂ ಹಾಲ್‌ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದುಹಾಶಿರ್ವಚನದ ಮೂಲಕ ಬೆಳ್ತಂಗಡಿ ಜಿಪ್ರಿ ತಂಲ್ ಉದ್ಘಾಟಿಸಿ ಮುಹಲ್ಲಿಮರು ಮಾದರಿ ಯೋಗ್ಯರಾಗಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು. ಕೇಂದ್ರೀಯ ಸಂಪನ್ನೂಲ ವ್ಯಕ್ತಿಗಳಾಗಿ ವಿಚಾರ ಮಂಡಿಸಿ ಮಾತನಾಡಿದ  ಕೊಡಗು ಅಬ್ದುರ್ಹ್ಮಾನ್ ಮುಸ್ಲಿಯಾರ್ ಮುಹಲ್ಲಿಮರ ಜವಾಬ್ದಾರಿ ಯನ್ನು ನೆನಪಿಸಿದರು.

ಇನ್ನೋರ್ವ ಭಾಷಣಗಾರ ಅಸ್ಲಮ್ ಅಝ್ಹರಿ ಮಾತನಾಡಿ ತಮ್ಮ ಸ್ವಂತ ಜೀವನ ಬದಲಾದರೆ ಸಮಾಜವನ್ನು ಬದಲಾಯಿಸಲು ಸಾಧ್ಯ ಎಂದರು. ಸಮಸ್ತ ಮುಶಾವರ ಸದಸ್ಯ ಉಸ್ಮಾನುಲ್ ಫೈಝಿ ಮಾತನಾಡಿ ಉಲಮಾಗಳು ವಸ್ತ್ರ ಸಂಹಿತೆಯಲ್ಲಿ ಕೂಡಾ ಇತರರಿಗೆ ಮಾದರಿಯಾಗ ಬೇಕು  ಎಂದರು.

ರಾಜ್ಯ ದಾರಿಮಿ ಒಕ್ಕೂಟದ ಎಸ್ ಬಿ ದಾರಿಮಿ ಮಾತನಾಡಿ ಮುಹಲ್ಲಿಮರ ಕಷ್ಟ  ನಿವಾರಿಸಲು  ಸಮಾಜ ಮತ್ತು ಸರಕಾರ ಮುಂದೆ ಬರಬೇಕು.ಮದ್ರಸ ಅಧ್ಯಾಪಕರಿಗೆ ವಕ್ಫ್ ಬೋರ್ಡ್ ಮೂಲಕ ನೆರವು ನೀಡಿದರೆ ಅದು ದೊಡ್ಡ ಹೊರೆಯಾಗದು ಎಂದರು. 

ಜಿಲ್ಲೆಯ ಬಹುತೇಕ ಮದ್ರಸಗಳು ಸಮಸ್ತದ ಆದರ್ಶದಂತೆ ನಡೆಯುತ್ತಿದೆ.ಆದರೆ ವಕ್ಫ್ ಹಜ್ ಮೊದಲಾದ ಧಾರ್ಮಿಕ ಮಂಡಳಿಗೆ ಆಯ್ಕೆ ಮಾಡುವಾಗ ಸಮಸ್ತದ ಪ್ರತಿನಿಧಿಗಳನ್ನು ಕಡೆಗಣಿಸುವುದು ಸರಿಯಲ್ಲ ಎಂದು ಹೇಳಿದರು. ಇದೇ ಸಂಧರ್ಭದಲ್ಲಿ ಸರಕಾರದ ನೂತನ ಸ್ಪೀಕರ್ ಯುಟಿ ಖಾದರ್‌ನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ  ಸ್ಪೀಕರ್ ಯು.ಟಿ.ಖಾದರ್  ಅವರು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಾನು ಸದಾ ಬದ್ಧನಾಗಿದ್ದೇನೆ. ಸಮುದಾಯದ ರಾಯಬಾರಿಗಳೆಂದರೆ ಅದು ಉಲಮಾಗಳು ಮಾತ್ರ. ಅವರ ಮಾರ್ಗದರ್ಶನ ಪಡೆದು ಮುಂದೆ ಸಾಗಿದರೆ ಇಲ್ಲಿ ಅಶಾಂತಿ ಅವ್ಯವಸ್ಥೆ ಉಂಟಾಗುವುದಿಲ್ಲ. ನನ್ನ ಇತಿಮಿತಿಯಲ್ಲಿ ಸಮಸ್ತದ ಕಾರ್ಯಕರ್ತ ರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ  ಎಂದು ಭರವಸೆ ನೀಡಿದರು.

ಸಮಾರೋಪ ಭಾಷಣ ಮಾಡಿದ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಮಾತನಾಡಿ ಕುರ್‌ಅನ್ ಕಲಿಕೆಯಲ್ಲಿ ಉಂಟಾಗುವ ಲೋಪದೋಷಗಳನ್ನು ಸರಿಪಡಿಸಲು ಅಧ್ಯಾಪಕರು ಶೃದ್ದೆ ವಹಿಸಬೇಕೆಂದು ಕರೆ ನೀಡಿದರು. ಹಾಜಿ ಕೆಂಪಿ ಮುಸ್ತಫ ಶುಭ ಹಾರೈಸಿದರು.

ಜಿಲ್ಲಾ ಜಂಯಿತ್ತುಲ್ ಮುಹಲ್ಲಿಮೀನ್ ಅಧ್ಯಕ್ಷ ಹಾಜಿ ಶಂಸುದ್ದಿನ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಕಡಬ ಇಬ್ರಾಹೀಂ ದಾರಿಮಿ ಕಿರಾಅತ್ ಪಠಿಸಿದರು. ಸಿದ್ದೀಖ್ ಪೈಝಿ ಕರಾಯ ಸ್ವಾಗತಿಸಿ ರೆಂಜಾಡಿ ದಾರಿಮಿ ವಂದಿಸಿದರು.

ಬೆಳಗ್ಗೆ ನಡೆದ ಸರಳ ಸಮಾರಂಭದಲ್ಲಿ ಕೇಂದ್ರಿಯ ಘಟಕದ ವತಿಯಿಂದ ಪ್ರತೀ ಜಿಲ್ಲೆಗೆ ಒಂದರಂತೆ ನೀಡಲಾಗುವ ಎಂಟು ಲಕ್ಷ ವೆಚ್ಚದ ಮುಹಲ್ಲಿಂ ಮಂಝಿಲ್‌ಗೆ ಸಯ್ಯಿದ್ ಅನಸ್ ತಂಳ್ ಶಿಲಾನ್ಯಾಸ ನೆರವೇರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ ಮನವಿ ವಾಚಿಸಿದರು.

Similar News