×
Ad

ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸ್ಪೀಕರ್ ಯು.ಟಿ. ಖಾದರ್‌ರಿಗೆ ಸನ್ಮಾನ

Update: 2023-06-12 22:13 IST

ಉಪ್ಪಿನಂಗಡಿ: ನೂತನ ವಿಧಾನ ಸಭಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಉಪ್ಪಿನಂಗಡಿಗೆ ಭೇಟಿ ನೀಡಿದ ಯು.ಟಿ. ಖಾದರ್ ಅವರನ್ನು ಜೂ.12ರಂದು ಉಪ್ಪಿನಂಗಡಿಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಉಪ್ಪಿನಂಗಡಿಗೆ ಆಗಮಿಸಿದ ಯು.ಟಿ. ಖಾದರ್ ಅವರನ್ನು ಉಪ್ಪಿನಂಗಡಿಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸನ್ಮಾಸಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್,  ಉಪಾಧ್ಯಕ್ಷ ಶಬೀರ್ ಕೆಂಪಿ, ಸಂಘದ ಕೈಲಾರ್ ರಾಜಗೋಪಾಲ ಭಟ್, ಇರ್ಷಾದ್ ಯು.ಟಿ. ಉಪಸ್ಥಿತರಿದ್ದರು. 

Similar News