×
Ad

ಮುಲ್ಕಿ: ಜೂಜಾಟ ಆರೋಪ; 13 ಮಂದಿ ಬಂಧನ

Update: 2023-06-13 21:32 IST

ಮುಲ್ಕಿ, ಜೂ.13: ತಾಲೂಕಿನ ಅತಿಕಾರಿ ಬೆಟ್ಟು ಗ್ರಾಮದ ಕಕ್ವ ಎಂಬಲ್ಲಿನ ಕೃಷ್ಣ ಎಂಬವರ ಮನೆಯ ಬಳಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ 13 ಮಂದಿಯನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕಿನ್ನಿಗೋಲಿ ಸಮೀಪದ ಮೂರುಕಾವೇರಿ ನಿವಾಸಿ ಡೇವಿಡ್ ಕಾಲಿನ ಡಿಸೋಜ, ಕಿಲ್ಪಾಡಿ ನಿವಾಸಿ ವಿನೋದ್‌, ಮುಂಡ್ಕೂರು ನಿವಾಸಿ ಸತೀಶ್, ಸಿಮಂತೂರು ನಿವಾಸಿಗಳಾದ ಶಶಿ ಯಾನೆ ಸತೀಶ, ಧೀರಜ್ ಶೆಟ್ಟಿ, ಸಂತೋಷ ಶೆಟ್ಟಿ, ಕಟೀಲು ಎಕ್ಕಾರು ನಿವಾಸಿ ಪ್ರಶಾಂತ್, ಕವತ್ತಾರು ನಿವಾಸಿ ಮಹೇಶ್, ಸುರತ್ಕಲ್‌ ಕುಳಾಯಿ ನಿವಾಸಿ ಜೇಮ್ಸ್, ಉಡುಪಿ ಜಿಲ್ಲೆ ಹೆಜಮಾಡಿ ನಿವಾಸಿ ಹರೀಶ್, ಕಿನ್ನಿಗೋಲಿ ನಿವಾಸಿ ಪ್ರತಾಪ್ ಶೆಟ್ಟಿ, ಮುಲ್ಕಿ ಲಿಂಕಪ್ಪಯ್ಯಕಾಡು ನಿವಾಸಿ ಶರಣಪ್ಪ, ಕಾಂಜರಕಟ್ಟೆ ನಿವಾಸಿ ವಿಠಲ ಎಂದು ತಿಳಿದು ಬಂದಿದೆ.

ಬಂಧಿತರಿಂದ ಇಸ್ಪೀಟು ಜೂಜಾಟಕ್ಕೆ ಉಪಯೋಗಿಸಿದ ನಗದು 1,17,310 ರೂ., ಮತ್ತು ಇತರ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.



ಆರೋಪಿಗಳು ಅತಿಕಾರಿ ಬೆಟ್ಟು ಗ್ರಾಮದ ಕಕ್ವ ಎಂಬಲ್ಲಿನ ಕೃಷ್ಣ ಎಂಬವರ ಮನೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ ಆಡುತ್ತಿರುವ ಕುರಿತು ಮುಲ್ಕಿ ಪೊಲೀಸ್‌ ಠಾಣೆಗೆ ಬಂದ ಖಚಿತ ಮಾಹಿತಿಯ ಮೇರೆಗೆ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವಿದ್ಯಾದರ ಡಿ. ಬಾಯ್ಕೇರಿಕರ್, ಪಿಎಸ್ಐ ವಿನಾಯಕ ತೊರಗಲ್ ಮತ್ತು ಅವರ ಸಿಬ್ಬಂದಿಯ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Similar News