×
Ad

ಮಂಗಳೂರು: ಆನ್‌ಲೈನ್ ನಲ್ಲಿ ವಂಚನೆ; ಪ್ರಕರಣ ದಾಖಲು

Update: 2023-06-15 21:23 IST

ಮಂಗಳೂರು, ಜೂ.15: ಆನ್‌ಲೈನ್ ಗೂಗಲ್ ರಿವೀವ್ ಟಾಸ್ಕ್ ಕೆಲಸ ಮಾಡಿದರೆ ಕಮಿಷನ್ ನೀಡುವುದಾಗಿ ನಂಬಿಸಿ 1,15,180 ರೂ. ವಂಚಿಸಿರುವ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂ.6ರಂದು ಫಿರ್ಯಾದಿದಾರರಿಗೆ ಅಪರಿಚಿತ ವ್ಯಕ್ತಿ ವಾಟ್ಸಪ್ ಸಂದೇಶ ಕಳುಹಿಸಿ ಗೂಗಲ್ ರಿವೀವ್ ಟಾಸ್ಕ್ ಕೆಲಸ ಮಾಡಿದರೆ ಕಮಿಷನ್ ನೀಡುವುದಾಗಿ ತಿಳಿಸಿ ಲಿಂಕ್ ಕಳುಹಿಸಿದ್ದ. ಅದನ್ನು ನಂಬಿದ ಫಿರ್ಯಾದಿದಾರರು ಮೂರು ಟಾಸ್ಕ್‌ಗಳನ್ನು ಪೂರ್ಣಗೊಳಿಸಿದ್ದರು.

ನಂತರ ಒಂದು ಟಾಸ್ಕ್‌ಗೆ 50 ರೂ.ನಂತೆ 150ರೂ.ಗಳನ್ನು ಫಿರ್ಯಾದಿದಾರರ ಬ್ಯಾಂಕ್ ಖಾತೆಗೆ ಪಾವತಿಯಾಗಿತ್ತು. ಆ ಬಳಿಕ  ಫಿರ್ಯಾದಿದಾರರು ಟಾಸ್ಕ್ ಮುಂದುವರಿಸಿದ್ದು, ಬೇರೆ ಬೇರೆ ಬ್ಯಾಂಕ್ ಖಾತೆಯಿಂದ 1,15,180 ರೂ. ಪಾವತಿಸಿ ಮೋಸ ಹೋಗಿದ್ದಾರೆ. ಅದರಂತೆ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.

Similar News