×
Ad

​ಮಂಗಳೂರು: ಯುವಕನಿಗೆ ಹಲ್ಲೆ ಪ್ರಕರಣ; 4 ಮಂದಿ ಸೆರೆ

Update: 2023-06-18 20:37 IST

ಮಂಗಳೂರು, ಜೂ.18: ಬಾವುಟಗುಡ್ಡೆ ಸಾರ್ವಜನಿಕ ಪ್ರದೇಶದಲ್ಲಿ ಚೂರಿಯಿಂದ ಇರಿದು ಯುವಕನ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ನಾಲ್ವರನ್ನು ಮಂಗಳೂರು ಉತ್ತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಲ್ಲಿಕಟ್ಟೆಯ ಮಹಮ್ಮದ್ ತುಫೈಲ್ (20), ನೀರು ಮಾರ್ಗದ ಮೊಹಮ್ಮದ್ ಆಫ್ರಿದ್ (19), ನೀರು ಮಾರ್ಗದ ಮಕ್ಸೂದ್ ಸಾಗ್ (21), ಬೋಳಾರದ ಅಬ್ದುಲ್ ಸತ್ತಾರ್ (19) ಬಂಧಿತ ಆರೋಪಿಗಳು.

ಕಿನ್ನಿಗೋಳಿ ಏಳಿಂಜೆ ನಿವಾಸಿ ಪ್ರಿಯಾ ಪಿಂಟೊ ಎಂಬಾಕೆ ಜೂ.16ರಂದು  ರಾತ್ರಿ 9:45ರ ಹೊತ್ತಿಗೆ ಇನ್‌ಸ್ಟಾಗ್ರಾಮ್ ಮೂಲಕ ನಿದೀಶ್‌ ಎಂಬಾತನನ್ನು ಸಂಪರ್ಕಿಸಿ, ಲೈಟ್ ಹೌಸ್ ಗುಡ್ಡದ ರಸ್ತೆಯಲ್ಲಿರುವ ಸೈಂಟ್  ಅಲೋಶಿಯಸ್ ಕಾಲೇಜು ಎದುರಿನ ಸಾರ್ವಜನಿಕ ಪ್ರದೇಶದಲ್ಲಿ ಭೇಟಿಯಾಗಲು ಬರುವಂತೆ ಹೇಳಿರುವುದಾಗಿ ಆರೋಪಿಸಲಾಗಿದೆ. ಅದರಂತೆ ನಿದೀಶ್ ತನ್ನ ಇಬ್ಬರು ಸ್ನೇಹಿತರ ಜೊತೆ ಕಾರಿನಲ್ಲಿ ಸ್ಥಳಕ್ಕೆ ಆಗಮಿಸಿದಾಗ, ಅಲ್ಲಿದ್ದ  ಪ್ರಿಯಾ ಪಿಂಟೊ ಮತ್ತು ಆಕೆಯ ಸಹಚರರಾದ ತುಫೈಲ್, ಅಫ್ರಿದ್, ಸಾಗ್ ಮತ್ತು ಸತ್ತಾರ್ ಅವರು ನಿದೀಶ್ ಮತ್ತು ಅವನ ಸ್ನೇಹಿತರೊಂದಿಗೆ ಜಗಳವಾಡಿ, ನಿದೀಶ್‌ನನ್ನು ಅವಾಚ್ಯವಾಗಿ ನಿಂದಿಸಿ ಎದೆಯ ಭಾಗಕ್ಕೆ ಚೂರಿಯಿಂದ ಇರಿದು ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Similar News