×
Ad

ಬೌದ್ಧಿಕ ವಿಕಸನಕ್ಕೆ ಚೆಸ್ ಪೂರಕ : ಪ್ರಭಾಕರ ಶ್ರೀಯಾನ್

Update: 2023-06-18 22:36 IST

ಮಂಗಳೂರು: ಮೆದುಳು ಚುರುಕಾಗಿ ಬೌದ್ಧಿಕ ವಿಕಸನಗೊಳ್ಳಲು ಚೆಸ್ ಆಟ ಪೂರಕ ಎಂದು ಸಾಮಾಜಿಕ ಕಾರ್ಯಕರ್ತ ಪ್ರಭಾಕರ ಶ್ರೀಯಾನ್ ಅಭಿಪ್ರಾಯ ಪಟ್ಟರು.

ದಕ್ಷಿಣ ಕನ್ನಡ ಚೆಸ್ ಅಸೋಸಿಯೇಶನ್ ಇದರ 3ನೇ ಅಂತರ್ ಜಿಲ್ಲಾ ಮುಕ್ತ ರ್ಯಾಪಿಡ್ ಚೆಸ್ ಪಂದ್ಯಾವಳಿಯನ್ನು ರವಿವಾರ ಕಂಕನಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಉದ್ಘಾಟಿಸಿ, ಅವರು ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಅಸೋಸಿಯೇಶನ್ ಮಂಗಳೂರು ಪ್ರತೀ ವರ್ಷ ಅಂತರ್ ಜಿಲ್ಲಾ ಚೆಸ್ ಪಂದ್ಯಾವಳಿ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಸುನಿಲ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಹಾಲಿಂಗೇಶ್ವರ ದೇವಳದ ಕಾರ್ಯದರ್ಶಿ ಡಾ.ರೋಶನ್ ಎಂ. ಅತಿಥಿಗಳಾಗಿದ್ದರು. ಚೆಸ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಕೋಟೆ, ಜತೆ ಕಾರ್ಯದರ್ಶಿ ಸತ್ಯ ಪ್ರಸಾದ್ ಕಮಿಲ, ಕೋಶಾಧಿಕಾರಿ ಪೂರ್ಣಿಮ ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕಂಕನಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಅಧ್ಯಕ್ಷ ಕೆ.ದೇವೇಂದ್ರ ಅಧ್ಯಕ್ಷತೆ ವಹಿಸಿದ್ದರು.

ಮನಪಾ ಸದಸ್ಯ ಪ್ರವೀಣ್ಚಂದ್ರ ಆಳ್ವ, ನಿಟ್ಟೆ ವಿವಿ ಅಸೋಸಿಯೇಟ್ ಡೀನ್ ಸ್ಟುಡೆಂಟ್ ವೆಲ್ಫೇರ್ ಡಾ.ಅಮರ ಶ್ರೀ ಅಮರನಾಥ ಶೆಟ್ಟಿ ಅತಿಥಿಗಳಾಗಿ ವಿಜೇತರಿಗೆ ಬಹುಮಾನ ವಿತರಿಸಿ, ಶುಭ ಹಾರೈಸಿದರು.

ದ.ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಹಾಸನ ಹಾಗು ಚಿಕ್ಕಮಗಳೂರು ಜಿಲ್ಲೆಗಳ 300ಕ್ಕಿಂತಲೂ ಅಧಿಕ ಸ್ಪರ್ಧಾಳುಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.,ವಿಜೇತರಿಗೆ ಒಟ್ಟು 50 ಸಾವಿರ ರೂ. ನಗದು ಬಹುಮಾನ ಹಾಗು ಟ್ರೋಫಿ ವಿತರಿಸಲಾಯಿತು. 7, 9, 11, 13, 15 ವರ್ಷದೊಳಗಿನವರಿಗೆ ಆಯಾ ವಿಭಾಗಗಳಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಿತು.

ಚೆಸ್ ಪಂದ್ಯಾಟ ವಿಜೇತರು : ಪಂದ್ಯಾವಳಿಯಲ್ಲಿ ಮೊದಲ ನಾಲ್ಕು ಸ್ಥಾನಗಳು ಮತ್ತು ಆರು ಹಾಗೂ ಏಳನೇ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆಗೆ ಸಂದಿದೆ. (ಪ್ರಥಮ) 4 ಸಾವಿರ ರೂ. ಹಾಗೂ ಟ್ರೋಫಿ ಸುಶಾಂತ್ ವಾಮನ ಶೆಟ್ಟಿ , (ದ್ವಿತೀಯ) 3 ಸಾವಿರ ರೂ. ಹಾಗೂ ಟ್ರೋಫಿ ನಿಹಾಲ್ ಮಂಜುನಾಥ್, (ತೃತೀಯ) 2 ಸಾವಿರ ರೂ. ಹಾಗೂ ಟ್ರೋಫಿಯನ್ನು ರವೀಶ್ ಕೋಟೆಗಳಿಸಿದರು. ಪ್ರತೀ ವಿಭಾಗಗಳಲ್ಲೂ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Similar News