×
Ad

ಕಲ್ಲರಕೋಡಿ: ನೂತನ ಶಾಲಾ‌ ಕಟ್ಟಡದ ಉದ್ಘಾಟನೆ

Update: 2023-06-19 21:49 IST

ಕೊಣಾಜೆ: ಉಳ್ಳಾಲ ತಾಲೂಕಿನ ಕಲ್ಲರಕೋಡಿಯ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಸೋಮವಾರ‌ ನಡೆಯಿತು.‌

ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು, ನರಿಂಗಾನ ಗ್ರಾಮದ ಈ ಕಲ್ಲರಕೋಡಿ ಶಾಲೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂಬುದು ಈ ಭಾಗದ ಜನರ ಬೇಡಿಕೆಯಾಗಿತ್ತು. ಇದೀಗ ಅವರ ಕನಸಿನಂತೆ ಶಾಲೆಯ ನೂತನ ಕಟ್ಟಡವು ಉದ್ಘಾಟನೆ ಗೊಂಡಿದೆ. ಮುಂದಿನ ದಿನಗಳಲ್ಲಿ ಪ್ರೌಢಶಾಲೆ ಕಟ್ಟಡವೂ ನಿರ್ಮಾಣವಾಗಲಿದೆ. ಸಮಾಜದ ಭವಿಷ್ಯ ರೂಪಿಸುವ ಮಕ್ಕಳು ಶೈಕ್ಷಣಿಕವಾಗಿ ಬೆಳೆಯಬೇಕು. ಅದಕ್ಕೆ  ಪೂರ್ಣ ಸಹಕಾರ ನೀಡಲಾಗುವುದು ಎಂದರು.

ನರಿಂಗಾನ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನವಾಝ್ ಕೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಪಂಚಾಯತ್ ನ ಮಾಜಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರಾ, ಜಿ.ಪಂ.ಮಾಜಿ ಅಧ್ಯಕ್ಷ ಮಮತಾ ಗಟ್ಟಿ, ಮುಖಂಡರಾದ ಅಬ್ದುಲ್ ಜಲೀಲ್  ಮೋಂಟುಗೋಳಿ, ಶಿಕ್ಷಣಾಧಿಕಾರಿ ಜ್ಞಾನೇಂದ್ರ, ರವೀಂದ್ರ ದೇವಾಡಿಗ, ಕೃಷಿ ನಿರ್ದೇಶಕ ಕೆಂಪಯ್ಯ ಗೌಡ, ರಹ್ಮಾನ್ ಚಂದಹಿತ್ಲು, ಹನೀಫ್ ಚಂದಹಿತ್ಲು, ಮುಹಮ್ಮದ್ ಮೋನು ಮಲಾರ್, ಮುರಳೀ,  ಶೈಲಜಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಕಲ್ಲರಕೋಡಿ ಶಾಲೆಯ ವತಿಯಿಂದ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಗೌರವಿಸಲಾಯಿತು. 

Similar News