×
Ad

ಕಾರಂದೂರು : ಮರ್ಕಝ್ ಕನ್ನಡಿಗರ ಒಕ್ಕೂಟದ ನೂತನ ಅಧ್ಯಕ್ಷರಾಗಿ ನೌಶಾದ್ ಕೊಕ್ಕಡ ಆಯ್ಕೆ

Update: 2023-06-21 21:56 IST

ಕಾರಂದೂರು: ಮರ್ಕಝ್ ಕನ್ನಡಿಗರ ಒಕ್ಕೂಟದ (ಕೆ.ಎಸ್.ಒ)  ಅಧ್ಯಕ್ಷರಾಗಿ ನೌಶಾದ್ ಕೊಕ್ಕಡ ಆಯ್ಕೆಯಾಗಿದ್ದಾರೆ.

ಮರ್ಕಝ್ ಮುದರ್ರಿಸ್ ಉಸ್ತಾದ್ ವಿ.ಪಿ.ಎಂ ಫೈಝಿ ವಿಲ್ಯಾಪಳ್ಳಿ ಅವರು ಅಧ್ಯಕ್ಷತೆಯಲ್ಲಿ ನಡೆದ ಒಕ್ಕೂಟದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ಉಪಾಧ್ಯಕ್ಷರುಗಳಾಗಿ ಸಯ್ಯಿದ್ ಅಲವಿ ಫಝಲ್ ಉಲ್ತೂರು, ರಾಫಿ ಹಿಮಮಿ ಸಖಾಫಿ ಕೊಡಗು, ಅನ್ಸಾರ್ ಕಾಟಿಪ್ಪಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಕುಕ್ಕಾಜೆ, ಕಾರ್ಯದರ್ಶಿಗಳಾಗಿ ಅಶ್ಫಾಖ್ ಉಪ್ಪಳ್ಳಿ, ಅಮ್ಮಾರ್ ನೀರಕಟ್ಟೆ, ಸ್ವಲಾಹುದ್ದೀನ್ ಕುತ್ತಾರು, ಕೋಶಾಧಿಕಾರಿಯಾಗಿ ಸಿದ್ದೀಕ್ ಸೆರ್ಕಳ  ಆಯ್ಕೆಯಾದರು.

ಒಕ್ಕೂಟದ ಅಧ್ಯಕ್ಷ  ಸಯ್ಯಿದ್ ಅಝ್ಹರುದ್ದೀನ್ ಉದ್ಘಾಟಿಸಿದರು. ಸಯ್ಯಿದ್ ಅಹ್ಮದ್ ಜಮಲುಲ್ಲೈಲಿ, ಶರಫುದ್ದೀನ್ ಅಂಡೋಣ, ಸಲೀಮ್ ಸಖಾಫಿ ಭದ್ರಾವತಿ, ಫಾರೂಖ್ ಸಖಾಫಿ ಕಡಬ ಉಪಸ್ಥಿತರಿದ್ದರು.

ಕೆ.ಎಸ್.ಒ ಪ್ರಧಾನ ಕಾರ್ಯದರ್ಶಿ ಬಶೀರ್ ಸಖಾಫಿ ಬೈತಡ್ಕ ವಾರ್ಷಿಕ ವರದಿ ಹಾಗೂ ಲೆಕ್ಕ ಮಂಡಿಸಿದರು. ಆಶಿಖ್ ಎಚ್. ಕಲ್ಲು ಸ್ವಾಗತಿಸಿ, ಸಿದ್ದೀಕ್ ಕುಕ್ಕಾಜೆ ವಂದಿಸಿದರು.

Similar News