×
Ad

ವಿವಾಹಿತ ಮಹಿಳೆ ನಾಪತ್ತೆ

Update: 2023-06-22 22:35 IST

ಬಜ್ಪೆ: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಕೆಂಜಾರು ಪ್ರದೇಶದ ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿ ರುವ ಕುರಿತು ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದವರನ್ನು ಕೆಂಜಾರು ಗ್ರಾಮದಲ್ಲಿ ವಾಸವಾಗಿರುವ ಪಂಕಜ್‌ ಕುಮಾರ್‌ ಗುಪ್ತಾ ಎಂಬವರ ಪತ್ನಿ ರಿಚಾಸಿಂಗ್ (29) ಎಂದು ತಿಳಿದು ಬಂದಿದೆ.

ನಾಪತ್ತೆಯಾಗಿರುವ ರಿಚಾ ಸಿಂಗ್‌ ಅವರು ಒಂದು ವಾರದಿಂದ ಕೆಲಸಕ್ಕೆ ತೆರಳದೇ ಮನೆಯಲ್ಲೇ ಇದ್ದರು. ಬುಧವಾರ 11.30ರ ಸುಮಾರಿಗೆ ಪತಿ ಪಂಕಜ್‌ ಅವರ ಮೊಬೈಲ್‌ಗೆ ಮೆಸೇಜ್‌ ಮಾಡಿದ್ದು, ನಾನು ಮನೆಬಿಟ್ಟು ತೆರಳುತ್ತಿರುವುದಾಗಿ ಹೆಳಿದ್ದರು. ಪಂಕಜ್‌ ಕುಮಾರ್‌ ಅವರು ಸಂಜೆ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಮನೆಗೆ ಬೀಗಹಾಕಿತ್ತು. ಟ್ಯೂಷನ್ ಗೆ ತೆರಳಿದ್ದ ಮಗನನ್ನು ವಿಚಾರಿಸಿದಾಗ ತಿಳಿದಿಲ್ಲ ಎಂದು ಹೇಳಿರುತ್ತಾನೆ. ಬಳಿಕ ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎಂದು ಪಂಕಜ್‌ ಕುಮಾರ್‌ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಕೊಂಡಿರುವ ಬಜ್ಪೆ ಪೊಲೀಸರು ಮಹಿಳೆಯ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

Similar News