×
Ad

ಬೈಕ್ ಢಿಕ್ಕಿ: ಪಾದಚಾರಿ ಮೃತ್ಯು

Update: 2023-06-22 22:40 IST

ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಸೇತುವೆ ಬಳಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರಿಗೆ ಬೈಕ್ ಡಿಕ್ಕಿ  ಹೊಡೆದ ಪರಿಣಾಮ ಪಾದಚಾರಿ ಸೆಲ್ವದಾರ್ ಫೆರ್ನಾಂಡೀಸ್ (63) ಎಂಬವರು ಸಾವನ್ನಪ್ಪಿ, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ  ಸಂಭವಿಸಿದೆ.

ಮೃತ ವ್ಯಕ್ತಿ ಇಳಂತಿಲ ಗ್ರಾಮದ ಬನ್ನೆಂಗಳ ನಿವಾಸಿಯಾಗಿದ್ದು, ಕಾರ್ಯ ನಿಮಿತ್ತ ಉಪ್ಪಿನಂಗಡಿಯ ಎಚ್.ಎಂ. ಹಾಲ್ ಬಳಿ ಬಂದವರು ರಸ್ತೆಯ ಬದಿಯಲ್ಲಿ ತನ್ನ ಓಮ್ನಿ ಕಾರನ್ನು ನಿಲ್ಲಿಸಿ ರಸ್ತೆಯ ಇನ್ನೊಂದು ಬದಿಗೆ  ಹೋಗುವ ಸಲುವಾಗಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಬೈಕ್ ಅವರಿಗೆ ಢಿಕ್ಕಿ ಹೊಡೆಯಿತು. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ, ಅಲ್ಲಿ ಅವರು ಮೃತಪಟ್ಟರು. ಘಟನೆಯಿಂದ  ಬೈಕ್ ಸವಾರ ನಿತಿನ್ (23) ಎಂಬವರೂ ಗಂಭೀರವಾಗಿ ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News