×
Ad

ಬಾಗಲಕೋಟೆ | ಬಸ್ ಹತ್ತುವ ವೇಳೆ ಮಹಿಳೆಯ ಮಾಂಗಲ್ಯ ಸರ ಕಳವು

Update: 2025-12-10 14:22 IST

ಬಾಗಲಕೋಟೆ : ಬಸ್ ಹತ್ತುವ ಸಂದರ್ಭದಲ್ಲಿ ಮಹಿಳೆಯೊಬ್ಬರ ಬ್ಯಾಗಿನಲ್ಲಿದ್ದ ಬಂಗಾರದ ಮಾಂಗಲ್ಯ ಸರ ಕಳುವಾದ ಘಟನೆ ಬಾಗಲಕೋಟೆ ಜಿಲ್ಲೆಯ ಇಲಕಲ್ ಬಸ್ ನಿಲ್ದಾಣದಲ್ಲಿ ನಡೆದಿದೆ.

ಮಲ್ಲಾಪೂರ ಗ್ರಾಮದ ಬಸಮ್ಮ ರಾಜನಾಳ ಅವರು ಗಜೇಂದ್ರಗಡಕ್ಕೆ ತೆರಳಲು ಇಲಕಲ್ ನಿಲ್ದಾಣದಲ್ಲಿ ಬಸ್ ಹತ್ತುವಾಗ, ಕಳ್ಳರು ಬ್ಯಾಗಿನ ಚೀಪ್ ಅನ್ನು ತೆರೆದು, ಬ್ಯಾಗ್‌ನಲ್ಲಿ ಇರಿಸಲಾಗಿದ್ದ ಸುಮಾರು 40 ಗ್ರಾಂ ಬಂಗಾರದ ಮಾಂಗಲ್ಯ ಸರವನ್ನು ಅಪಹರಿಸಿದ್ದಾರೆ.

ಮಹಿಳೆ ಬಸ್ ಹತ್ತಿ ಸೀಟ್‌ನಲ್ಲಿ ಕುಳಿತ ಬಳಿಕ ಸಂಬಂಧಿಕರು ಬ್ಯಾಗಿನ ಚೀಪ್ ತೆರೆಯಲ್ಪಟ್ಟಿರುವುದನ್ನು ಗಮನಿಸಿ ತಿಳಿಸಿದ ನಂತರ ಮಹಿಳೆ ಹುಡುಕಿದರೂ ಚಿನ್ನ ಸಿಕ್ಕದೇ ಪರಿತಪಿಸಿದ್ದು, ಜೋರಾಗಿ ಕಿರುಚಿ ಹಾಯ ಕೇಳಿದ್ದಾರೆ. ತಕ್ಷಣ ಬಸ್‌ ಅನ್ನು ಇಳಕಲ್ ನಗರ ಪೊಲೀಸ್ ಠಾಣೆಗೆ ಕರೆ ತರಲಾಗಿದೆ.

ನಂತರ ಪೋಲಿಸರು ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರನ್ನೂ ಹಾಗೂ ಅವರ ಬ್ಯಾಗ್‌ಗಳನ್ನು ಪರಿಶೀಲಿಸಿದರೂ ಚಿನ್ನ ಪತ್ತೆಯಾಗಿಲ್ಲ. ನಂತರ ಬಸ್‌ನ್ನು ಬಿಡಲಾಗಿದ್ದು, ಪ್ರಕರಣದ ಬಗ್ಗೆ ಇಲಕಲ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News