×
Ad

ದೇವನಹಳ್ಳಿ: ಕೃಷಿ ಹೊಂಡಕ್ಕೆ ಬಿದ್ದು ಯುವ ದಂಪತಿ ಮೃತ್ಯು

Update: 2023-07-31 13:12 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.31: ಯುವ ದಂಪತಿ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟ ಘಟನೆ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ನಡೆದಿರುವುದು ವರದಿಯಾಗಿದೆ.

ಮೃತರನ್ನು ಕೆರೆಕೋಡಿ ನಿವಾಸಿ ರಮೇಶ್(26) ಹಾಗೂ ಅವರ ಪತ್ನಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಜರುಗಹಳ್ಳಿ ಗ್ರಾಮದ ನಿವಾಸಿ ಸಹನಾ (22) ಎಂದು ಗುರುತಿಸಲಾಗಿದೆ.

ವಿಜಯಪುರದ ಬಿಜ್ಜವಾರ ಗ್ರಾಮದಲ್ಲಿ ರವಿವಾರ ಈ ಅವಘಡ ಸಂಭವಿಸಿದೆ.

ದೇವನಹಳ್ಳಿಯ ರೆಡ್ಡಿ ಇಲೆಕ್ಟ್ರಾನಿಕ್ಸ್ ನಲ್ಲಿ ವ್ಯವಸ್ಥಾಪಕರಾಗಿದ್ದ ರಮೇಶ್ ಅವರು ಸಹನಾರನ್ನು ಪ್ರೀತಿಸಿ ಐದು ತಿಂಗಳ ಹಿಂದೆ ವಿವಾಹವಾಗಿದ್ದರೆನ್ನಲಾಗಿದೆ. ಐದು ದಿನಗಳ ಹಿಂದೆ ದಂಪತಿ ಬಿಜ್ಜವಾರದ ಸಂಬಂಧಿಕರ ಮನೆಗೆ ಬಂದಿದ್ದರು. ಅಲ್ಲಿ ಅಶ್ವತ್ಥನಾರಾಯಣ ಎಂಬವರ ತೋಟದ ಕೃಷಿ ಹೊಂಡದಲ್ಲಿ ಇವರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.

ಸ್ಥಳಕ್ಕೆ ಭೇಟಿ ನೀಡಿರುವ ವಿಜಯಪುರ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News