×
Ad

ಆರ್ಥಿಕ ಅಭಿವೃದ್ಧಿಗೆ ಸಹಕಾರ : ಕರ್ನಾಟಕ-ನ್ಯೂಜೆರ್ಸಿ ಒಪ್ಪಂದ

Update: 2025-09-22 21:07 IST

ಬೆಂಗಳೂರು, ಸೆ.22: ತಂತ್ರಜ್ಞಾನ, ನಾವೀನ್ಯತೆ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರವನ್ನು ಬಲಪಡಿಸಲು ರಾಜ್ಯ ಸರಕಾರ ಮತ್ತು ನ್ಯೂಜೆರ್ಸಿ ರಾಜ್ಯವು ಮೂರು ವರ್ಷಗಳ ಮಹತ್ವದ ಒಪ್ಪಂದ ಮಾಡಿದೆ.

ಸೋಮವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ನ್ಯೂಜೆರ್ಸಿ ಪ್ರತಿನಿಧಿಗಳೊಂದಿಗೆ ಬಹು ಕ್ಷೇತ್ರಗಳ ಆರ್ಥಿಕ ಅಭಿವೃದ್ಧಿ ಒಪ್ಪಂದಕ್ಕೆ ಸಹಿ ಹಾಕಿದರು.

ಸಾಫ್ಟ್ ಲ್ಯಾಂಡಿಂಗ್ ಮತ್ತು ನವೋದ್ಯಮಗಳಿಗೆ ಬೆಂಬಲ, ನ್ಯೂಜೆರ್ಸಿಯಲ್ಲಿ ಅವಕಾಶಗಳನ್ನು ಹುಡುಕುತ್ತಿರುವ ಕರ್ನಾಟಕದ ನವೋದ್ಯಮಗಳು ಮತ್ತು ಕರ್ನಾಟಕವನ್ನು ಅನ್ವೇಷಿಸುವ ನ್ಯೂಜೆರ್ಸಿ ನವೋದ್ಯಮಗಳಿಗೆ ಮಾರುಕಟ್ಟೆ ಪ್ರವೇಶ, ಮಾರ್ಗದರ್ಶನ ಮತ್ತು ಪರಿಸರ ವ್ಯವಸ್ಥೆ ಸುಧಾರಣೆ ಸೇರಿದಂತೆ ಹಲವು ವಿಚಾರಗಳು ಈ ಒಪ್ಪಂದದಲ್ಲಿ ಇವೆ.

ಈ ಸಂದರ್ಭದಲ್ಲಿ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಏಕ್‍ರೂಪ್ ಕೌರ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News