ಹಲ್ಲೆಗೊಳಗಾದರೂ ತಮ್ಮ ಕರ್ತವ್ಯ ನಿರ್ವಹಿಸಿದ ಜಿಬಿಎ ಅಧಿಕಾರಿಗಳಿಗೆ ಸನ್ಮಾನ

Update: 2026-07-24 22:14 IST

ಬೆಂಗಳೂರು : ಶಿವಾಜಿನಗರದಲ್ಲಿ ಇತ್ತೀಚೆಗೆ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸುವ ಸಂದರ್ಭದಲ್ಲಿ ಕಿಡಿಗೇಡಿಗಳಿಂದ ಹಲ್ಲೆಗೊಳಗಾದರೂ ತಮ್ಮ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳನ್ನು ಶುಕ್ರವಾರ ವಿಕಾಸಸೌಧದ ಕಚೇರಿಗೆ ಆಹ್ವಾನಿಸಿ ಸಚಿವ ಕೃಷ್ಣಬೈರೇಗೌಡ ಸನ್ಮಾನಿಸಿದರು.

ಜಿಬಿಎ ಕಾರ್ಯಾಪಲಕ ಇಂಜಿನಿಯರ್ ಆತಿಫ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್‍ಗಳಾದ ಮಾಧವ ರಾವ್, ಸಾವಿತ್ರಿ, ಸಹಾಯಕ ಇಂಜಿನಿಯರ್ ರುಚಿತಾ, ಇಂಜಿನಿಯರ್ ಗೌತಮ್ ಹಾಗೂ ಜೆಸಿಬಿ ಮಾಲಕರು ಸನ್ಮಾನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕೇಂದ್ರ ನಗರ ಪಾಲಿಕೆ ಆಯುಕ್ತ ಜಗದೀಶ್, ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಯ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಉಪಸ್ಥಿತರಿದ್ದರು.

‘ಸರಕಾರ ಎಷ್ಟೇ ಯೋಜನೆ ರೂಪಿಸಿದರೂ, ಅದನ್ನು ಜನರಿಗೆ ತಲುಪಿಸಲು ನಿಷ್ಠಾವಂತ ಅಧಿಕಾರಿಗಳೇ ಅಡಿಪಾಯ. ಸಮಾಜಘಾತಕ ಶಕ್ತಿಗಳ ಜೀವ ಬೆದರಿಕೆಗೂ ಹೆದರದೆ, ಶಿವಾಜಿನಗರದ ಫುಟ್‍ಪಾತ್ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನಮ್ಮ ಜಿಬಿಎ ಯೋಧರಿಗೆ ಅಭಿನಂದನೆಗಳು. ನಿಮ್ಮಂತಹ ಅಧಿಕಾರಿಗಳೇ ನಮ್ಮ ಇಲಾಖೆಗೆ ಮತ್ತು ಸರಕಾರಕ್ಕೆ ನಿಜವಾದ ಶಕ್ತಿ’

-ಕೃಷ್ಣಬೈರೇಗೌಡ, ಜಿಬಿಎ ಸಚಿವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News