×
Ad

ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಬೇಡಿ : ಕೇಂದ್ರದಿಂದ ನಿರ್ದೇಶನ

Update: 2025-10-04 19:36 IST

ಸಾಂದರ್ಭಿಕ ಚಿತ್ರ |PC : freepik

ಬೆಂಗಳೂರು, ಅ.4: ಕೆಮ್ಮು ಮತ್ತು ಶೀತದ ಸಿರಪ್‍ಗಳನ್ನು ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಶಿಫಾರಸು ಮಾಡಬಾರದು ಅಥವಾ ವಿತರಿಸಬಾರದು ಎಂದು ಕೇಂದ್ರ ಸರಕಾರವು ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿದೆ.

ಕೇಂದ್ರ ಸರಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯವು ಎಲ್ಲ ರಾಜ್ಯಗಳ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಕೆಮ್ಮು ಮತ್ತು ಶೀತದ ಔಷಧಿಗಳನ್ನು ಸಾಮಾನ್ಯವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಶಿಫಾರಸು ಮಾಡುವುದಿಲ್ಲ. ಒಂದು ವೇಳೆ ಔಷಧಿಗಳ ಬಳಕೆ ಅಗತ್ಯ ಎಂದು ಅನಿಸಿದರೆ, ಎಚ್ಚರಿಕೆಯಿಂದ ಕ್ಲಿನಿಕಲ್ ಮೌಲ್ಯಮಾಪನವನ್ನು ಅನುಸರಿಸಬೇಕು. ಬಹು ಔಷಧಿಗಳ ಸಂಯೋಜನೆಯನ್ನು ತಪ್ಪಿಸಬೇಕು ಎಂದು ತಿಳಿಸಿದೆ.

ಮಕ್ಕಳಲ್ಲಿ ಕಂಡುಬರುವ ಹೆಚ್ಚಿನ ತೀವ್ರವಾದ ಕೆಮ್ಮು ಕಾಯಿಲೆಗಳು ಸೀಮಿತವಾಗಿರುತ್ತವೆ. ಹಾಗೆಯೇ ಔಷಧೀಯ ಹಸ್ತಕ್ಷೇಪವಿಲ್ಲದೆಯೇ ಪರಿಹಾರ ಆಗುತ್ತವೆ. ಹೀಗಾಗಿ ಔಷಧೇತರ ಕ್ರಮಗಳಾದ ದೇಹದಲ್ಲಿ ನಿರ್ಜಲೀಕರಣ ಸಂಭವಿಸದಂತೆ ಎಚ್ಚರಿಕೆ ವಹಿಸುವುದು, ವಿಶ್ರಾಂತಿ ಪಡೆಯುವುದು ಸೇರಿ ಇತರೆ ಆರೋಗ್ಯ ಕ್ರಮಗಳನ್ನು ಅನುಸರಿಸಬೇಕು ಎಂದು ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News