×
Ad

ಕೇಜ್ರಿವಾಲ್ ಬಿಡುಗಡೆಗೆ ಆಗ್ರಹಿಸಿ ಜು.30ಕ್ಕೆ ಪ್ರತಿಭಟನೆ : ಎಎಪಿ

Update: 2024-07-28 22:52 IST

ಬೆಂಗಳೂರು : ಅಬಕಾರಿ ಹಗರಣದಲ್ಲಿ ಬಂಧನವಾಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿದ್ದು, ಶೀಘ್ರ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಆಮ್ ಆದ್ಮಿ ವತಿಯಿಂದ ಜು.30ರಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಅವರಿಗೆ ನ್ಯಾಯಾಲಯದಲ್ಲಿ ಜಾಮೀನು ನೀಡಿದ್ದರೂ ಸಹ ಸಿಬಿಐ ನವರು ಒಬ್ಬ ಮುಖ್ಯಮಂತ್ರಿಯ ವಿರುದ್ಧ ಭಯೋತ್ಪಾದಕರ ರೀತಿಯಲ್ಲಿ ಬಾಡಿ ವಾರೆಂಟ್ ತಂದು ಮತ್ತೆ ಸೆರೆಮನೆಗೆ ತಳ್ಳಿರುವುದು ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ಕಗ್ಗೊಲೆ ಎಂದು ತಿಳಿಸಿದರು.

ಸೆರೆಮನೆಯಲ್ಲಿ ಕೇಜ್ರಿವಾಲ್ ಅವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿದ್ದು, ಇವರ ಜೀವಕ್ಕೆ ಭಾರಿ ಸಂಚಕಾರ ಇರುವ ಸ್ಪಷ್ಟ ಅನುಮಾನ ಕಾಡುತ್ತಿದೆ. ನಿರಂಕುಶ ಮೋದಿ ಪ್ರಭುತ್ವದ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News