ಡಯಾಲಿಸಿಸ್ ಸೇವೆ ಒದಗಿಸಲು 5.54 ಕೋಟಿ ರೂ.ಗಳಿಗೆ ಅನುಮೋದನೆ
Update: 2025-09-12 21:00 IST
PC : freepik
ಬೆಂಗಳೂರು, ಸೆ.12: ರಾಜ್ಯದಲ್ಲಿ 350 ಡಯಾಲಿಸಿಸ್ ರೋಗಿಗಳಿಗೆ ಪೆರಿಟೋನೀಯಲ್ ಡಯಾಲಿಸಿಸ್ (ಪಿಡಿ) ಸೇವೆಗಳನ್ನು ಒದಗಿಸುವ ಸಲುವಾಗಿ ಪಿಡಿ ಬ್ಯಾಗ್‍ಗಳು ಸೇರಿ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು 5.54 ಕೋಟಿ ರೂ.ಗಳಿಗೆ ಸರಕಾರ ಅನುಮೋದನೆ ನೀಡಿದೆ.
ಪ್ರಾರಂಭದಲ್ಲಿ 350 ರೋಗಿಗಳಿಗೆ ಪರಿಟೋನೀಯಲ್ ಡಯಾಲಿಸಿಸ್ ಸೇವೆ ನೀಡಲಾಗುವುದು. ಪ್ರತಿ ಜಿಲ್ಲೆಗೆ ಅಂದಾಜು 10 ರೋಗಿಗಳನ್ನು ನಿರ್ದಿಷ್ಟಗೊಳಿಸಲಾಗುತ್ತದೆ. ರೋಗಿಗಳ ಆಯ್ಕೆಯನ್ನು ನೆಫಾಲಜಿಸ್ಟ್ ಮೂಲಕ ಮಾಡಲಾಗುವುದು.
ಕ್ಯಾಥೆಟರ್ ಅಳವಡಿಸುವುದು, ಆಸ್ಪತ್ರೆಯ ವೆಚ್ಚ, ತರಬೇತಿ ಮತ್ತು ಪ್ರಥಮ ಪೆರಿಟೋನೀಯಲ್ ಡಯಾಲಿಸಿಸ್ ಸೇಷನ್ ಸೇರಿದಂತೆ ಪ್ರತಿ ತಿಂಗಳಿಗೆ 26,400 ರೂ.ಗಳಂತೆ ಸ್ಯಾಟ್(ಎಸ್‍ಎಎಸ್‍ಟಿ) ವತಿಯಿಂದ ಭರಿಸಲಾಗುತ್ತದೆ ಎಂದು ಸರಕಾರ ಆದೇಶ ಹೊರಡಿಸಿದೆ.