×
Ad

ಬೆಂಗಳೂರು | ನಾಳೆ (ಎ.7) ಸಿಪಿಐ ರಾಜಕೀಯ ಸಮಾವೇಶ

Update: 2024-04-06 23:06 IST

ಬೆಂಗಳೂರು: ಸಂವಿಧಾನ, ಪ್ರಜಾಪ್ರಭುತ್ವ, ಬಹುತ್ವ ಭಾರತ ಉಳಿಸಲು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಭಾರತೀಯ ಕಮ್ಯೂನಿಷ್ಟ್ ಪಕ್ಷ (ಸಿಪಿಐ) ನೇತೃತ್ವದಲ್ಲಿ ನಾಳೆ (ಎ.7) ಬೆಳಗ್ಗೆ 11ಕ್ಕೆ ನಗರದ ವೈಯಾಲಿಕಾವಲ್‍ನಲ್ಲಿರುವ ತೆಲುಗು ವಿಜ್ಞಾನ ಸಮಿತಿ ಸಭಾಂಗಣದಲ್ಲಿ ಸಿಪಿಐ ರಾಜಕೀಯ ಸಮಾವೇಶ ನಡೆಯಲಿದೆ.

ಸಮಾವೇಶದಲ್ಲಿ ಇಂಡಿಯಾ ಮೈತ್ರಿಕೂಟದಲ್ಲಿನ ಸಿಪಿಐ, ಕಾಂಗ್ರೆಸ್, ಸಿಪಿಎಂ, ಸಿಪಿಐ(ಎಂಎಲ್), ಆಪ್‍ನ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಇದೇ ವೇಳೆ ‘ಬಿಜೆಪಿ ಏತಕ್ಕಾಗಿ ಸೋಲಿಸಬೇಕು’ ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News