ಔಷಧ ಖರೀದಿಗಾಗಿ 880 ಕೋಟಿ ರೂ.ಬಳಕೆಗೆ ಸರಕಾರದ ಅನುಮೋದನೆ
Update: 2025-08-01 21:33 IST
ಬೆಂಗಳೂರು ಪ್ರಸಕ್ತ ಸಾಲಿನಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಔಷಧಗಳು, ಉಪಭೋಗ್ಯ ವಸ್ತುಗಳು ಹಾಗೂ ರಾಸಾಯನಿಕಗಳನ್ನು ಸರಬರಾಜು ಮಾಡಲು 880.68 ಕೋಟಿ ರೂ.ಗಳನ್ನು ಬಳಕೆ ಮಾಡಿಕೊಳ್ಳುವಂತೆ ರಾಜ್ಯ ಸರಕಾರವು ಅನುಮೋದನೆ ನೀಡಿ ಆದೇಶಿಸಿದೆ.
ಆರೋಗ್ಯ ಸಂಸ್ಥೆಗಳಿಗೆ 883 ಔಷಧಗಳು, ಉಪಭೋಗ್ಯ ವಸ್ತುಗಳು ಮತ್ತು ರಾಸಾಯನಿಕಗಳ ಖರೀದಿಗಾಗಿ 838.13 ರೂ. ಕೋಟಿ ಅನುದಾನ ಅಗತ್ಯವಿದೆ. ಹೆಚ್ಚುವರಿಯಾಗಿ, 7 ಹಿಮೋಫಿಲಿಯಾ ವಿರೋಧಿ ಔಷಧಿಗಳ ಖರೀದಿಗೆ 42.55 ಕೋಟಿ ರೂ. ಅಗತ್ಯವಿದೆ. ಹೀಗಾಗಿ ಒಟ್ಟು ಪ್ರಸ್ತಾವಿತ 890 ಔಷಧಿಗಳಿಗೆ 880.68 ರೂ. ಕೋಟಿ ಆಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಸ್ತಾವ ಸಲ್ಲಿಸಿತ್ತು.
ಅದರಂತೆ ಕೆಟಿಪಿಪಿ ಕಾಯ್ದೆ 1999 ಹಾಗೂ ಕೆಟಿಪಿಪಿ ನಿಯಮ 2000ಗಳನ್ನು ಅನುಸರಿಸಿ ಟೆಂಡರ್ ಮೂಲಕ ಔಷಧಗಳನ್ನು ಸಂಗ್ರಹಿಸಿ ಆರೋಗ್ಯ ಸಂಸ್ಥೆಗಳಿಗೆ ಸರಬರಾಜು ಮಾಡಲು 880.68 ಕೋಟಿ ರೂ.ಗಳನ್ನು ಬಳಕೆ ಮಾಡಲು ಅನುಮೋದನೆ ನೀಡಿ ಆದೇಶಿಸಲಾಗಿದೆ.