×
Ad

ರಾಜ್ಯದಲ್ಲಿ ಎಫ್‌ಪಿಒಗಳಿಂದ 1,073 ಕೋಟಿ ರೂ. ವಹಿವಾಟು : ಸಚಿವ ಚಲುವರಾಯಸ್ವಾಮಿ

Update: 2025-02-28 22:27 IST

ಬೆಂಗಳೂರು : ರಾಜ್ಯದ ವಿವಿಧ ಯೋಜನೆಗಳಲ್ಲಿ ವಿವಿಧ ಸಂಸ್ಥೆಗಳಿಂದ 1,472 ಕೃಷಿ ಉತ್ಪಾದಕ ಸಂಸ್ಥೆಗಳನ್ನು(ಎಫ್.ಪಿ.ಒ.) ರಚಿಸಲಾಗಿದ್ದು, ಒಟ್ಟು 8.26 ಲಕ್ಷ ರೈತ ಷೇರುದಾರರನ್ನು ಸಂಘಟಿಸಲಾಗಿದೆ. ಆ ಮೂಲಕ ಒಟ್ಟಾರೆ 1,073 ಕೋಟಿ ರೂ.ಗಳ ವ್ಯವಹಾರ ವಹಿವಾಟು ನಡೆಸಲಾಗಿದೆ ಎಂದು ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಶುಕ್ರವಾರ ಇಲ್ಲಿನ ತೋಟಗಾರಿಕಾ ಮಹಾವಿದ್ಯಾಲಯದ ಆವರಣದಲ್ಲಿ ಜಲಾನಯನ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಕೃಷಿ ಉತ್ಪಾದಕ ಸಂಸ್ಥೆಗಳ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರ ಪ್ರತಿ ರೈತ ಉತ್ಪಾಕದಕರ ಸಂಸ್ಥೆಗಳ ನಿರ್ವಹಣಾ ವೆಚ್ಚಕ್ಕಾಗಿ ಮೂರು ವರ್ಷಗಳಿಗೆ ಗರಿಷ್ಠ 18 ಲಕ್ಷ ರೂ. ನೀಡುತ್ತಿದೆ. ಸಂಸ್ಥೆಗಳ ರಚನೆ ಮತ್ತು ಉತ್ತೇಜನಕ್ಕಾಗಿ ಸಮುದಾಯ ಆಧಾರಿತ ವ್ಯವಹಾರ ಸಂಸ್ಥೆಗಳಿಗೆ ಐದು ವರ್ಷಗಳ ಅವಧಿಗೆ ಗರಿಷ್ಠ 25 ಲಕ್ಷ ರೂ. ನೀಡಲಾಗುತ್ತಿದೆ ಎಂದು ತಿಳಿಸಿದರು.

ಪ್ರತಿ ಷೇರುರುದಾರರಿಗೆ/ರೈತ ಸದಸ್ಯರಿಗೆ ಗರಿಷ್ಠ ರೂ.2000 ಮೀರದಂತೆ ಪ್ರತಿ ರೈತ ಉತ್ಪಾದಕರ ಸಂಸ್ಥೆಗೆ ಗರಿಷ್ಠ 15 ಲಕ್ಷ ರೂ. ಇಕ್ವಿಟಿ ಅನುದಾನವನ್ನು ವ್ಯವಹಾರ ಬಂಡವಾಳವಾಗಿ ನೀಡಲಾಗುತ್ತಿದೆ. ಕೃಷಿ ಹಾಗೂ ಕೃಷಿಕರು ಅಭ್ಯುಧ್ಯುಯದ ಹಾದಿಯಲ್ಲಿ ಸಾಗುವ ಸುದಿನಗಳು ಪ್ರಾರಂಭವಾಗಿವೆ. ಕೃಷಿಕ ಎಲ್ಲಾ ರೀತಿಯಲ್ಲೂ ಸಬಲನಾಗಬೇಕು ಎಂಬುದು ಸರಕಾರದ ಆಶಯ. ಅದಕ್ಕಾಗಿ ಕೃಷಿ ಉತ್ಪಾದಕ ಸಂಸ್ಥೆಗಳನ್ನು ರಚಿಸಿ ಸಂಘಟಿಸಿ ಉತ್ಪಾದಕರ ಸರಪಳಿಯನ್ನು ಸದೃಡಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಎಫ್‍ಪಿಒಗಳ ಸ್ಥಾಪನೆಯಿಂದ ಮಧ್ಯವರ್ತಿಗಳ ಹಾವಳಿ ತಡೆಯಲು ಸಾಧ್ಯ. ಎಫ್‍ಪಿಒಗಳ ಸ್ಥಾಪನೆಯಿಂದ ಸ್ಥಳೀಯ ರೈತ ಸಮೂದಾಯದ ಸಾಮಥ್ರ್ಯ, ಅಭಿವೃದ್ಧಿ ಮತ್ತು ವ್ಯವಹಾರಿಕ ಪಾಲುದಾರಿಕೆ ಸಾಧ್ಯ. ನಮ್ಮ ಸರಕಾರ ಈ ಎಫ್‍ಪಿಒಗಳಿಗೆ 2024-25ನೇ ಸಾಲಿನಲ್ಲಿ 21 ಕೋಟಿ ರೂಪಾಯಿ ಸಹಾಯಧನ ನೀಡಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ವಿಷ್ಣುವರ್ಧನ್, ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಮಹೇಶ್ ಶಿರೂರು ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News