×
Ad

ನಟ ಶಿವರಾಜ್‍ಕುಮಾರ್ ಸಂಸತ್ತಿಗೆ ಹೋಗಬೇಕಿದೆ: ಡಿ.ಕೆ.ಶಿವಕುಮಾರ್

Update: 2023-12-10 22:12 IST

ಬೆಂಗಳೂರು: ಚಿತ್ರ ನಟ ಶಿವರಾಜ್ ಕುಮಾರ್ ಅವರು ಸಂಸತ್ತಿಗೆ ಹೋಗಬೇಕಿದೆ. ಮೂರ್ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇವೆ ಎನ್ನುತ್ತಿದ್ದಾರೆ. ಸಿನಿಮಾ, ಕಥೆ ಇದ್ದೇ ಇದೆ. ಸಂಸತ್ತಿಗೆ ಹೋಗುವುದನ್ನು ತಡೆಯಾಗಬಾರದು ಎಂದಿದ್ದೇನೆ. ಅವರು ಎಲ್ಲಿ ಟಿಕೆಟ್ ಕೇಳುತ್ತಾರೋ ಅಲ್ಲಿ ಟಿಕೆಟ್ ಕೊಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.

ರವಿವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಆರ್ಯ ಈಡಿಗ ಸಮಾವೇಶದಲ್ಲಿ ಮಾತನಾಡಿದ ಅವರು, ಸಂಘಟನೆಯಿಂದ ಒಗ್ಗಟ್ಟಾಗಬೇಕು ಎಂಬುದನ್ನು ಈ ಸಮಾವೇಶದಿಂದ ನೀವು ತೋರಿಸಿಕೊಟ್ಟಿದ್ದೀರಿ. ನಾವು ಸಿದ್ದರಾಮಯ್ಯನವರ ಸರಕಾರದ ಜೊತೆಗೆ ಇದ್ದೇವೆ ಎಂಬ ಸಂದೇಶವನ್ನು ನೀಡಿದ್ದೀರಿ. ಸಹಕಾರ ಮಾಡಿದವರನ್ನು ಮರೆಯಲ್ಲ, ನೀವೆಲ್ಲ ಅನೇಕ ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದೀರಿ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಿಮಗೆ ಸಹಾಯ ಮಾಡುವ ಮಾತುಕೊಟ್ಟಿದ್ದೇವೆ, ಉಳಿಸಿಕೊಳ್ಳುತ್ತಿದ್ದೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News