×
Ad

ಆನೇಕಲ್‍ | ಪೊಲೀಸರಿಗೆ ಹೆದರಿ ನ್ಯಾಯಾಧೀಶರ ಕೊಠಡಿಗೆ ನುಗ್ಗಿದ ರೌಡಿಶೀಟರ್ ಬಂಧನ

Update: 2025-04-26 21:20 IST

ಬೆಂಗಳೂರು : ಪೊಲೀಸರು ತನ್ನನ್ನು ಬಂಧನ ಮಾಡಲು ಬರುತ್ತಿದ್ದಾರೆಂದು ಅರಿತು ವಾಂಟೆಡ್ ರೌಡಿಶೀಟರ್‌ವೊಬ್ಬ, ನ್ಯಾಯಾಧೀಶರ ಕೊಠಡಿಗೆ ನುಗ್ಗಿದ ಘಟನೆ ವರದಿಯಾಗಿದೆ.

ಇಲ್ಲಿನ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೀಲಲಿಗೆ ನಿವಾಸಿ ವಿನಯ್(25) ಎಂಬಾತ ಶನಿವಾರ ಆನೇಕಲ್‍ನ 3ನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರ ಕೊಠಡಿಗೆ ನುಗ್ಗಿದ್ದಾನೆ.

ಪ್ರಕಣವೊಂದರ ಹಿನ್ನೆಲೆಯಲ್ಲಿ ಆರೋಪಿ ವಿನಯ್ ಇಂದು ಕೋರ್ಟ್‍ನತ್ತ ಬರುತ್ತಿದ್ದ. ಈತನ ಮೇಲೆ ಬೇರೊಂದು ಪ್ರಕರಣದ ಆರೋಪ ಇದ್ದುದರಿಂದ ಪೊಲೀಸರು ಈತನಿಗಾಗಿ ಕಳೆದ ಹಲವು ದಿನಗಳಿಂದ ಶೋಧ ನಡೆಸುತ್ತಿದ್ದರು. ಇಂದು ಕಾಣಿಸಿಕೊಂಡಿದ್ದು, ತನ್ನನ್ನು ಪೊಲೀಸರು ಹಿಡಿಯಲು ಬರುತ್ತಿದ್ದಾರೆ ಎಂದು ಹೆದರಿ ವಿನಯ್ ನೇರವಾಗಿ ನ್ಯಾಯಾಧೀಶರ ಕೊಠಡಿಗೆ ನುಗ್ಗಿದ್ದಾನೆ ಎಂದುಗೊತ್ತಾಗಿದೆ.

ಘಟನೆ ಸಂಬಂಧ ಕೋರ್ಟ್ ಶಿರಸ್ತೇದಾರ್ ಆನೇಕಲ್ ಠಾಣೆಗೆ ದೂರು ನೀಡಿದ್ದು, ಈ ದೂರು ಆಧರಿಸಿ ಆರೋಪಿ ವಿನಯ್‍ನನ್ನು ಆನೇಕಲ್‌ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News